

ಹುಬ್ಬಳ್ಳಿ: ಎಸ್ಎಂ ಕೃಷ್ಣ ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಇಲ್ಲಿನ ಕಸಬಾಪೇಟ ಠಾಣೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಾಮಲಿಂಗೇಶ್ವರ ನಗರದ ನಾಗರಾಜ ದುರಗುಪ್ಪ ಬಾಚಣಕಿ, ಹಳೇ ಹುಬ್ಬಳ್ಳಿಯ ಮಹಮದ್ ರಫಿಕ್ (ಬಿಸ್ಲೇರಿ ರಫಿಕ್) ಧಾರವಾಡ, ಬಾಣತಿ ಕಟ್ಟದ ಸುಭಾಷ ಉರುಫ್ ಪಚ್ಚಾ ಕಟ್ಟಿಮನಿ, ಶರಾವತಿ ನಗರದ ಡೇವಿಡ್ ಫ್ರಾನಿಸಸ್ ಪೋಪಟ್ ಬಂಧಿತರು. ಬಂಧಿತರಿಂದ 5.3 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ಆಭರಣ, ಟಾಟಾ ಏಸ್ ಸೇರಿ ಒಟ್ಟು 4,95, 380 ರೂ. ಮೌಲ್ಯದವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಬಂದಿತರನ್ನು ನ್ಯಾಯಾಂಗ ವಶಕ್ಕೆ ನೀಡಿದೆ.