ಕುಚಿಪುಡಿ ರಂಗ ಪ್ರವೇಶ ಜೂ. 24 ರಂದು

prerana kala balaga
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಜೂ. 24 ರಂದು ಸಂಜೆ 5 ಗಂಟೆಗೆ ಪ್ರೇರಣಾ ಕಲಾ ಬಳಗದ ನಾಲ್ವರು ವಿದ್ಯಾರ್ಥಿಗಳ ಕುಚಿಪುಡಿ ರಂಗ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಳಗದ ಸಂಸ್ಥಾಪಕಿ ವಿದುಷಿ ಜ್ಯೋತಿ ಗಲಗಲಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷತಾ ನಾಗರೆಡ್ಡಿ, ಭೂಮಿಕಾ ಚೌಗುಲಾ, ಸ್ವಾತಿ ಶೆಟ್ಟೆಪ್ಪನವರ ಹಾಗೂ ತ್ರಿಶಾ ಶೆಟ್ಟಿ ಕುಚಿಪುಡಿ ರಂಗಪ್ರವೇಶ ಮಾಡುವರು. ಅವರಿಗೆ ಹೈದರಾಬಾದ್​ನ ಭಾರತೀಯ ನೃತ್ಯ ಸಂಸ್ಥೆಯ ನಿರ್ದೇಶಕ ನಟರಾಜ ಕೃಷ್ಣಮೂರ್ತಿ ಗೆಜ್ಜೆ (ಗುಂಗ್ರೂ) ಪ್ರಧಾನ ಮಾಡುವರು ಎಂದರು.

ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಉದ್ಘಾಟಿಸುವರು. ಪ್ರಾಚಾರ್ಯುಯರಾದ ಭಾರತಿ ಶಾನಭಾಗ, ಡಾ. ಸುಪ್ರೀತಾ ಮಲ್ಲಿಕಾರ್ಜುನ, ಡಾ. ವಿಜಯಶ್ರೀ ಕಲಬುರ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ತಿರುಪತಿಯ ಭಾರತೀಯ ನೃತ್ಯ ಸಂಸ್ಥೆ ಅಧ್ಯಕ್ಷ ಡಾ. ಆರ್.ಎನ್.ಪಿ. ಶ್ರೀನಾಥಪ್ರಸಾದ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಪ್ರೇರಣಾ ಕಲಾ ಬಳಗ ಕಳೆದ 38 ವರ್ಷಗಳಿಂದ ನೃತ್ಯ ಸೇವೆಯನ್ನು ಮಾಡುತ್ತಿದೆ. ಕಳೆದ ವರ್ಷ 6 ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ ಮಾಡಿದ್ದರು. ಈ ಬಾರಿ 4 ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net