

ಮಾರಕಾಸ್ತ್ರ ಹೊಂದಿದ್ದ ನಾಲ್ಕು ವಿದ್ಯಾರ್ಥಿಗಳನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು, ಕೃತ್ಯಕ್ಕೆ ಬಳಸಿದ್ದ 4 ಲಕ್ಷ ರೂ. ಮೌಲ್ಯದ ಕಾರು, ಎರಡೂವರೆ ಅಡಿ ಉದ್ದದ ಲಾಂಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸಮರ್ಥ, ಉತ್ಸವ್, ದರ್ಶನ್ ಮತ್ತು ಅಭಿಷೇಕ್ ಬಂಧಿತ ವಿದ್ಯಾರ್ಥಿಗಳು. ಸ್ನೇಹಿತರನ್ನು ಹೆದರಿಸಲು ಲಾಂಗ್ ಇಟ್ಟುಕೊಂಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಕ್ರಿಕೆಟ್ ಆಟ ಆಡುವ ವಿಚಾರದಲ್ಲಿ ಸ್ನೇಹಿತರಲ್ಲೇ ಎರಡು ಗುಂಪುಗಳಾಗಿವೆ. ಇದೇ ವಿಚಾರದಲ್ಲಿ ಸ್ನೇಹಿತನ ಜತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಹೆದರಿಸಲು ಮಂಗಳವಾರ ಕಾರಿನಲ್ಲಿ ಲಾಂಗ್ ಇಟ್ಟುಕೊಂಡಿದ್ದರು. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.