ನಾಲ್ವರು ದರೋಡೆಕೋರರ ಬಂಧನ

Arrest
Published on

ಬೆಳಗಾವಿ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಪ್ರಕರಣದಲ್ಲಿ ಕಾಕತಿ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ನಗರದ ಶಿವಾಜಿ ವಂಟಮೂರಿ, ವಿಶಾಲ್​ಮಾಸ್ತಿ, ಭೀಮರಾಯ ಕರಿಕಟ್ಟಿ, ಮಾರುತಿ ಹಂಚಿನಮನಿ ಬಂಧಿತರು. ಹುಕ್ಕೇರಿ ತಾಲೂಕಿನಿಂದ ಬೆಳಗಾವಿ ನಗರಕ್ಕೆ ಬರುತ್ತಿರುವ ಸಂದರ್ಭದಲ್ಲಿ ವಂಟಮೂರಿಯಲ್ಲಿ ಕೆಲ ಯುವಕರು ಬೈಕ್​ ಮೇಲೆ ಬಂದು ಲಾರಿಯನ್ನು ಅಡ್ಡಗಟ್ಟಿ ದರೋಡೆ ಮಾಡಿ ಹಣ ಹಾಗೂ ಮೊಬೈಲ್​ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಲಾರಿ ಚಾಲಕ ಭೀರಪ್ಪ ಸಂಕೇಶ್ವರ ನೀಡಿದ ದೂರಿನ ಆಧಾರದ ಮೇಲೆ ನಾಲ್ವರನ್ನು ಬಂಧಿಸಿ, ಮೊಬೈಲ್​, ಬೈಕ್​ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net