ಮೈಸೂರು: ರೈತರ ಪಂಪ್‌ಸೆಟ್‌ಗಳಲ್ಲಿ ಮೊಟಾರು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮೈಸೂರು ದಕ್ಷಿಣ ಠಾಣೆ ಪೊಲೀಸರು, ಕಳವು ಮಾಡಿದ್ದ ಮೋಟಾರು, ಸಾಗಣೆ ವಾಹನ, ನಗದು ವಶಪಡಿಸಿಕೊಂಡಿದ್ದಾರೆ.
ಮೈಸೂರು ದಕ್ಷಿಣ ಠಾಣಾ ಅಪರಾಧ ಪತ್ತೆ ದಳದ ಸಿಬ್ಬಂದಿ ಗುರುವಾರ ಗಸ್ತಿನಲ್ಲಿದ್ದಾಗ ಮಾಹಿತಿ ಮೇರೆಗೆ ಸರಕು ಸಾಗಣೆ ವಾಹನವನ್ನು ತಡೆದು ನಾಲ್ವರನ್ನು ತಪಾಸಣೆ ನಡೆಸಿದಾಗ 4 ಸಬ್‌ಮರ್ಸಿಬಲ್ ಮೋಟಾರ್‌ಗಳು ಪತ್ತೆಯಾಗಿವೆ. ಈ ಬಗ್ಗೆ ಕುಲಂಕಷವಾಗಿ ವಿಚಾರಿಸಿದಾಗ ನಾಲ್ವರು ಸೇರಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಒಟ್ಟು 11 ಸಬ್ ಮರ್ಸಿಬಲ್ ಮೋಟಾರ್‌ಗಳು, ಕೃತ್ಯಕ್ಕೆ ಬಳಸಿದ ಸರಕು ಸಾಗಣೆ ವಾಹ, ಒಂದು ಆಪೇ ಅಟೋ, ಒಂದು ಕಾರು, ಒಂದು ಪ್ಯಾಸೆಂಜರ್ ಅಟೋ, ಒಂದು ಕಮರ್ಷಿಯಲ್ ಸಿಲಿಂಡರ್ ಹಾಗೂ 18 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ಮೈಸೂರು ದಕ್ಷಿಣ ಠಾಣೆಯ ಒಂದು, ಹುಲ್ಲಹಳ್ಳಿ, ತಿ.ನರಸೀಪುರ ಠಾಣೆಯ ತಲಾ 3 ಪ್ರಕರಣಗಳು, ಕವಲಂದೆ ಪೊಲೀಸ್ ಠಾಣೆಯ ಒಂದು ಹಾಗೂ ಮಂಡ್ಯ ಜಿಲ್ಲೆಯ ಅರಕೆರೆ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 9 ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಅವರ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಅಧೀಕ್ಷಕಿ ಡಾ.ಬಿ.ಎನ್.ನಂದಿನಿ, ಎಲ್.ನಾಗೇಶ, ಅವರ ನೇತೃತ್ವದಲ್ಲಿ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಡಾ.ಎಂ.ಎಲ್ ಶೇಖರ್, ಪಿಎಸ್‌ಐ ಕೆ.ಎ. ಚಂದ್ರ, ಎಎಸ್‌ಐ ಸತೀಶ್, ಸಿಬ್ಬಂದಿ ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ, ಸಿ.ಕೆ.ಮಹೇಶ, ಎಂ.ಆರ್.ವಿಶ್ವನಾಥ, ಬಿ.ಎಂ.ಸುನೀಲ್ ಕುಮಾರ್, ಚಾಲಕ ಸಂಜಯ್ ಮತ್ತಿತರರಿದ್ದರು.