ನಕಲಿ ನೋಟಿನೊಂದಿಗೆ ನಾಲ್ವರ ಬಂಧನ

Fake note
Published on

ಉಳ್ಳಾಲ: 2.40 ಲಕ್ಷ ರೂ. ನಕಲಿ ನೋಟು ಚಲಾವಣೆ ಯತ್ನದಲ್ಲಿದ್ದ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಸೈಯದ್ ಹಕೀಬ್, ಫೈಸಲ್ ಖಾನ್, ಮೊಹಮ್ಮದ್ ಜಮಾನ್, ಉಳ್ಳಾಲ ಬಸ್ತಿಪಡ್ಪು ನಿವಾಸಿ ಆರಿಫ್ ಬಂಧಿತರು. ಸಲೀಂ, ರಂಜಿತ್ ಎಂಬುವರು ಪರಾರಿಯಾಗಿದ್ದಾರೆ.

ಉಳ್ಳಾಲ ಬೀಚ್ ಬಳಿ ಭಾನುವಾರ ಸಂಜೆ ಕೆ.ಎ 01- 6968 ನಂಬರಿನ ಕಾರು ನಿಂತಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರು ಸಂಶಯದಿಂದ ಕಾರಿನ ಬಳಿ ಹೋಗಿದ್ದರು. ಇದೇ ಸಂದರ್ಭ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ವಾಹನದೊಳಗಿದ್ದ ನಾಲ್ವರು ಯುವಕರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 4 ಕಟ್ಟುಗಳಲ್ಲಿ 500 ರೂ. ಮುಖಬೆಲೆಯ 2.40 ಲಕ್ಷ ರೂ. ನಕಲಿ ನೋಟು ಪತ್ತೆಯಾಗಿದೆ. ಜುಬೈರ್ ಮತ್ತು ರಿಯಾಜ್ ಎಂಬುವರು ನಕಲಿ ನೋಟು ನೀಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಕಮಿಷನ್ ಆಸೆಯಿಂದ ನಕಲಿ ನೋಟು ಮಾರಾಟಕ್ಕೆ ಬಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಬೆಂಗಳೂರು ನೋಂದಣಿಯ ಕಾರು, 5 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net