ಸುರೇಂದ್ರನ್ ಕೊಲೆ ಪ್ರಕರಣ ಇಬ್ಬರ ಬಂಧನ

murder
Published on

ಮಂಗಳೂರು: ಕಾವೂರು ಮಲ್ಲಿ ಬಡಾವಣೆ ನಿವಾಸಿ ಸುರೇಂದ್ರನ್(60) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಡಿಕಲ್ ನಿವಾಸಿ ಸಂತೋಷ್ ಸಪಲ್ಯ(43) ಮತ್ತು ಹಾವೇರಿ ನಿವಾಸಿ ಸಿದ್ದು(28) ಬಂಧಿತರು. ನ.3ರಂದು ಹಾಡಹಗಲೇ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಸಂಜೆಯ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಬೆನ್ನುಹತ್ತಿದ ಸಿಸಿಬಿ ಪೊಲೀಸರು ಹಾಗೂ ಕಾವೂರು ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸುರೇಂದ್ರನ್ ಅವರು ಸಂತೋಷ್ ಅವರ ಬಳಿ ಕೆಲವು ಸಮಯದ ಹಿಂದೆ ಮನೆಗೆ ಸಂಬಂಧಿಸಿದ ಕೆಲಸ ಮಾಡಿಸಿಕೊಂಡಿದ್ದರು. ಅದರಲ್ಲಿ ಸುಮಾರು 25 ಸಾವಿರ ರೂ. ಕೊಡಲು ಬಾಕಿ ಇತ್ತು. ಈ ಕುರಿತು ಸಂತೋಷ್ ಮತ್ತೆ ಮತ್ತೆ ಕೇಳುತ್ತಿದ್ದ. ಅದರಂತೆ ಕೊಲೆ ನಡೆದ ದಿನವೂ ಆತ ಮನೆಗೆ ಬಂದು ಕೇಳಿದ್ದ. ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಸಂಶಯದ ಮೇಲೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

ಮೂಲತಃ ಕೇರಳದವರಾದ ಸುರೇಂದ್ರನ್ ಫಾರ್ಮ್ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. ಹಲವು ವರ್ಷದಿಂದ ಕಾವೂರು ಮಲ್ಲಿ ಬಡಾವಣೆಯಲ್ಲಿ ಸ್ವಂತ ಮನೆ ಮಾಡಿ ಪತ್ನಿ ಜತೆ ವಾಸಿಸುತ್ತಿದ್ದರು. ಕೊಲೆ ನಡೆದ ಸಂದರ್ಭ ಪತ್ನಿ ಮನೆಯಲ್ಲಿ ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net