ಯೂನಿಟ್ ರಕ್ತದಿಂದ ನಾಲ್ವರಿಗೆ ಜೀವದಾನ

15 tth 01
ತೀರ್ಥಹಳ್ಳಿ ತಾಲೂಕು ಅರಳಸುರಳಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಆರಗ ಜ್ಞಾನೇಂದ್ರ, ಹೆದ್ದೂರು ನವೀನ್, ಸಂತೋಷ್ ದೇವಾಡಿಗ ಇತರರಿದ್ದರು.
Published on

ತೀರ್ಥಹಳ್ಳಿ: ರಕ್ತದಾನದಿಂದ ಒಮ್ಮೆ ಸಂಗ್ರಹಿಸುವ ಯೂನಿಟ್ ರಕ್ತದಲ್ಲಿ ನಾಲ್ವರ ಜೀವ ಉಳಿಸಲು ಸಾಧ್ಯವಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ತಾಲೂಕಿನ ಅರಳಸುರಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ರೋಟರಿ ಕ್ಲಬ್ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ದಾನಗಳಲ್ಲಿ ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಬೇಕೆಂದು ತಿಳಿಸಿದರು.
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಸಂತೋಷ್ ದೇವಾಡಿಗ, ಕುಕ್ಕೆ ಪ್ರಶಾಂತ್, ನಾರಾಯಣ ರಾವ್, ಶ್ರೀನಿಧಿ, ನಾಗೇಂದ್ರ, ಹರೀಶ್, ರಾಘು, ಸುದೀಪ್, ಪ್ರದೀಪ್ ಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net