ಅಕ್ರಮ ಮದ್ಯ ಸಾಗಿಸುತ್ತಿದ್ದ ನಾಲ್ವರ ಬಂಧನ

Illegal-liker
Published on

ಕಾರವಾರ:ಗೋವಾದಿಂದ ಕಾರವಾರದ ಕಡೆಗೆ ಕಾಡಿನಲ್ಲಿ ಅಕ್ರಮವಾಗಿ ಮದ್ಯ ಹೊತ್ತು ಸಾಗಿಸುತ್ತಿದ್ದ ನಾಲ್ವರನ್ನು ಚಿತ್ತಾಕುಲಾ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕಾರವಾರ ತಾಲೂಕಿನ ಹಣಕೋಣ ಗ್ರಾಪಂ ವ್ಯಾಪ್ತಿಯ ಹೋಟೆಗಾಳಿ ಮೂಲದ ನಾರಾಯಣ ಶಂಕರ ಮಾಳಸೇಕರ್,ರಾಜೇಶ್ ಆನಂದ್ ಗಜನಿಕರ್,ಗಂಗಾಧರ್ ಮಾಳಸೇಕರ್, ಗೋವಿಂದ ಕೊಳಬಕರ್ ಬಂಧಿತರು. ಅವರಿಂದ 34,000 ರೂ. ಮೌಲ್ಯದ ಅಕ್ರಮ ಸಾರಾಯಿಯನ್ನು ವಶಕ್ಕೆ ಪಡೆಯಲಾಗಿದೆ.

ಗಂಗಾಧರ್ ಮಾಳಸೇಕರ್, ಅರ್ಜುನ್ ಮಾಳಸೇಕರ್ ಎಂಬ ಇನ್ನಿಬ್ಬರು ಪರಾರಿಯಾಗಿದ್ದಾರೆ. ಇವರು ಗೋವಾದಿಂದ ಹೋಟೆಗಾಳಿ ಭೀಮಕೋಲ್‌ ಕೆರೆಯ ಮಾರ್ಗವಾಗಿ ಗೋವಾ ಮದ್ಯ ಸಾಗಿಸುತ್ತಿದ್ದರು.

ಗ್ರಾಮದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಗೋವಾ ದಿಂದ ಕಾರವಾರ ತಾಲೂಕಿನ ಹೋಟಗಾಳಿಯ ಭೀಮಕೋಲ್ ಅರಣ್ಯ ವ್ಯಾಪ್ತಿಯಲ್ಲಿ ಸಾಗಾಟ ಮಾಡುತ್ತಿರುವಾಗ ಕಚಿತ ಮಾಹಿತಿ ಪಡೆದ ಚಿತ್ತಾಕುಲ ಠಾಣೆ ಉಪನಿರೀಕ್ಷಕರಾದ ಮಹಾಂತೇಶ್ ವಾಲ್ಮೀಕಿ ರವರ ತಂಡ ದಾಳಿ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಮಾದೇವ್ ಸಿದ್ದಿ,ರಾಜೇಶ್ ಪ್ರಭು,ಬಸವರಾಜ್ ಇ.ಪಿ. ಅಭಿಜಿತ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net