ಮುಂಜಾವದಲ್ಲಿ ಕಾರು ಕಳ್ಳತನಕ್ಕೆ ಯತ್ನ, ಪೊಲೀಸ್ ವಾಹನ ಸೈರನ್ ಶಬ್ದ ಕೇಳಿ ನಾಲ್ವರು ಪರಾರಿ

1-1.jpg
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಅಂಗಡಿಯೊಂದರಲ್ಲಿನ ಕಾರು ಕಳ್ಳತನ ಮಾಡಲು ಯತ್ನಿಸಿದ ಕಳ್ಳರು, ಪೊಲೀಸ್ ಸೈರನ್ ಶಬ್ದ ಕೇಳುತ್ತಿದ್ದಂತೆ ಪರಾರಿಯಾಗಿದ್ದಾರೆ.
ನಾಲ್ವರು ಅಂಗಡಿಯ ಷಟರ್ ಎತ್ತಿ, ಅಲ್ಯೂಮಿನಿ ಯಮ್ ಪಾರ್ಟಿಷಿಯನ್ ಗ್ಲಾಸ್ ಡೋರ್ ಪುಡಿ ಪುಡಿ ಮಾಡಿ ಒಳ ಪ್ರವೇಶಿಸಿದ್ದಾರೆ.  ಕಾರಿನ ಕೀ ಹುಡುಕಾಡುವಷ್ಟರಲ್ಲಿ ನಗರಠಾಣೆಯ ಪೊಲೀಸರ ಸೈರನ್ ಶಬ್ದ ಕೇಳಿ ಬಂದಿದೆ. ಇದರಿಂದ ಭಯಗೊಂಡು ಕಳ್ಳ ಓಡಿ ಹೋಗಿದ್ದಾರೆ. ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಬೆಳಗಿನ ಜಾವ ೩ ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಕೋಲಾರ ರಸ್ತೆಯ ನೇತಾಜಿ ಸುಭಾಷ್ ಚಂದ್ರಬೋಸ್ ವೃತ್ತದ ಪಕ್ಕದಲ್ಲಿರುವ ಎಂ.ಎಸ್. ಕಂಪ್ಯೂಟರ್ ಕೀ ಅಂಡ್ ಆಟೋ ಎಲೆಕ್ಟಿಕಲ್ಸ್ ಅಂಗಡಿಯ ಮಾಲೀಕರು  ಮನ್ಸೂರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಸಿ ಕ್ಯಾಮರಾ ದೃಶ್ಯಗಳನ್ನು ಆಧಾರಿಸಿ ತನಿಖೆ ಕೈಗೊಂಡಿದ್ದಾರೆ.
ಇಲ್ಲಿ ಕಳ್ಳತನಕ್ಕೆ ಯತ್ನಿಸಿದವರು   ನೆರೆಯ ಅಂಧ್ರಪ್ರದೇಶದ ಮದನಪಲ್ಲಿಯಲ್ಲಿ ಕಾರು ಕಳ್ಳತನ ಮಾಡಿಕೊಂಡು ಹೋಗಿರುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net