

ಕೋಲಾರ: ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನದ ಚುನಾವಣೆಗೆ ಭಾನುವಾರ ಕಾಂಗ್ರೆಸ್ ಬೆಂಬಲಿತ ನಾಲ್ವರು ನಾಮಪತ್ರ ಸಲ್ಲಿಸಿದರು.
ಜೂ.25ಕ್ಕೆ ಚುನಾವಣೆ ನಿಗದಿಯಾಗಿದ್ದು, ಕೋಲಾರ ಈಶಾನ್ಯ ಕ್ಷೇತ್ರದಿಂದ ಸೀಸಂದ್ರ ಗೋಪಾಲಗೌಡ, ಮಾಲೂರು ಟೇಕಲ್ ಕ್ಷೇತ್ರದಿಂದ ಶಾಸಕ ಕೆ.ವೈ. ನಂಜೇಗೌಡ, ಮಾಲೂರು ಕಸಬಾದಿಂದ ಎಂ.ಎನ್ ಶ್ರೀನಿವಾಸ್, ಕೋಲಾರ ಮಹಿಳಾ ಮೀಸಲು ದಕ್ಷಿಣ ಕ್ಷೇತ್ರದಿಂದ ಆರ್.ಕಾಂತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಶಾಸಕರ ಸಾಥ್
ಕೋಮುಲ್ ಚುನಾವಣೆಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಬಂದು ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳ ಪರ ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್. ಅನಿಲ್ಕುಮಾರ್, ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಸೇರಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಾಥ್ ನೀಡಿದರು.