

ಮಂಡ್ಯ: ಮಳವಳ್ಳಿ ತಾಲೂಕು ಮುತ್ತತ್ತಿಯ ಕಾವೇರಿ ನದಿಯಲ್ಲಿ ಮಂಗಳವಾರ ಈಜಲು ಹೋದ ನಾಲ್ವರು ನೀರು ಪಾಲಾಗಿದ್ದಾರೆ.
ಮೈಸೂರು ನಗರದ ವಿದ್ಯಾರಣ್ಯಪುರಂನ ನಾಗೇಶ್(55), ಭರತ್(17), ಗುರುಕುಮಾರ್(32) ಮತ್ತು ಮಹದೇವ(14) ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆಂದು ಸುಮಾರು 50 ಜನರು ಬಸ್‌ನಲ್ಲಿ ಮುತ್ತತ್ತಿಗೆ ಬಂದಿದ್ದಾರೆ. ಈ ವೇಳೆ ಈಜಲು ಹೋದ ನಾಲ್ವರು ನೀರು ಪಾಲಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.