ನಾಲ್ವರು ಕೊಲೆ ಆರೋಪಿಗಳ ಬಂಧನ

h29-Police 3
Published on

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆ ನಿವಾಸಿ ಸ್ಯಾಮುಯಲ್ ಮಬ್ಬು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಲೇಮಾನ ಬಳ್ಳಾರಿ, ಟೈಟಾಸ್ ಬಾಬು ವೆನ್ನಮ್ಮ, ಮಹ್ಮದಷಾ ಫಿರೋಜಾಬಾದ್, ಮೌಲಾಸಾಬ್ ರಮಜಾನವರ ಬಂಧಿತರು. ಡಿ. 27ರಂದು ನಡೆದಿದ್ದ ಕೊಲೆ ಪ್ರಕರಣವು ಬೆಂಡಿಗೇರಿ ಠಾಣೆಯಲ್ಲಿ ದಾಖಲಾಗಿತ್ತು. ಎಸಿಪಿ ಉಮೇಶ ಚಿಕ್ಕಮಠ, ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದ ತಂಡ ತನಿಖೆ ಚುರುಕುಗೊಳಿಸಿ, 24ಗಂಟೆಯಲ್ಲಿ ಹೆಡೆಮುರಿ ಕಟ್ಟಿ ನ್ಯಾಯಾಲಯ ವಶಕ್ಕೆ ನೀಡಿದೆ. ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹ ಕಾರಣವೆಂಬುದು ತನಿಖಾ ವೇಳೆ ಬಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net