

ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಹೋಬಳಿಯ ಹೊಲೆರಹಳ್ಳಿಯ ಕೋಳಿಫಾರಂನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಪಶ್ಚಿಮ ಬಂಗಾಳ ಅಲ್ಲಿಪುರದ ಒಂದೇ ಕುಟುಂಬದ ನಾಲ್ವರು ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಅಲ್ಲಿಪುರದ ಕಾಲೇ ಸರೇರಾ (60), ಲಕ್ಷ್ಮೀಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ (16) ಮೃತರು.
ರಾತ್ರಿ ಸುರಿಯುತ್ತಿದ್ದ ಮಳೆಯಿಂದಾಗಿ ಚಳಿ ಹಾಗೂ ಸೊಳ್ಳೆಗಳಿಂದ ಪಾರಾಗಲು ಮನೆಯ ಕಿಟಕಿ, ಬಾಗಿಲು ಮುಚ್ಚಿ ಡಬ್ಬದಲ್ಲಿ ಇದ್ದಿಲಿಗೆ ಬೆಂಕಿ ಹಾಕಿ ಮಲಗಿದ್ದು, ದಟ್ಟ ಹೊಗೆ ಆವರಿಸಿ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.
ವಾರದ ಹಿಂದಷ್ಟೆ ಕೆಲಸಕ್ಕೆ ಬಂದಿದ್ದರು: ಹೊಲೆಯರಹಳ್ಳಿಯ ಒಡೆಯರಹಳ್ಳಿ ರಸ್ತೆಯಲ್ಲಿನ ಕೋಳಿಫಾರಂನಲ್ಲಿ ಕೆಲಸ ಮಾಡಲು ವಾರದ ಹಿಂದಷ್ಟೆ ಬಂದಿದ್ದ ಕುಟುಂಬ ಾರಂ ಸಮೀಪದ ಮನೆಯಲ್ಲಿ ವಾಸವಿತ್ತು. ಎಂದಿನಂತೆ ಕೆಲಸದ ಬಗ್ಗೆ ವಿಚಾರಿಸಲು ಕೋಳಿಫಾರಂ ಮಾಲೀಕ ಮೋಹನ್ ಕರೆ ಮಾಡಿದ್ದಾರೆೆ. ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಸ್ಥಳಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.