

ನೆಲಮಂಗಲ: ಕಾರು ಕದ್ದು ಪರಾರಿಯಾಗಿದ್ದ ನಾಲ್ವರನ್ನು ಬಂಧಿಸಿ ಲಾಂತರ ರೂಪಾಯಿ ಬೆಲೆಬಾಳುವ 2 ಕಾರು ಹಾಗೂ ಮೊಬೈಲ್ಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಾರಗೋಡನಹಳ್ಳಿ ನಿವಾಸಿ ಶರತ್(25), ಕೃಷ್ಣಾನಗರ ನಿವಾಸಿಗಳಾದ ಸಾಧಿಕ್ಪಾಷಾ(27), ಸೂರ್ಯ (24), ಆನೇಕಲ್ ತಾಲೂಕಿನ ಕಮ್ಮಸಂದ್ರ ನಿವಾಸಿ ದರ್ಶನ್(20) ಬಂಧಿತರು. ಆ.16ರ ಸಂಜೆ ದರ್ಶನ್ ಹಾಗೂ ಶರತ್ ಬೆಂಗಳೂರಿನ ಲಗ್ಗೆರೆಯಿಂದ ನೆಲಮಂಗಲಕ್ಕೆ ದಿನೇಶ್ ಎಂಬಾತನ ಬಾಡಿಗೆ ಕಾರಿನಲ್ಲಿ ಬಂದಿದ್ದರು. ರಾ.ಹೆದ್ದಾರಿ 48ರ ಜಕ್ಕಸಂದ್ರ ಬಳಿ ದಿನೇಶ್ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ದರ್ಶನ್ ಹಾಗೂ ಶರತ್ ಇಬ್ಬರು ಕಾರು ಕಳವು ಮಾಡಿ ಪರಾರಿಯಾಗಿದ್ದರು. ಚಾಲಕ ದಿನೇಶ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಗರ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ, 10 ಲಕ್ಷ ಮೌಲ್ಯದ ಎರಡು ಕಾರು ಹಾಗೂ 2ಲಕ್ಷ ಮೌಲ್ಯದ 8 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಸಿನಿಮೀಯ ರೀತಿ ಬಂಧನ : ಕಾರಿನೊಂದಿಗೆ ಪರಾರಿಯಾದ ದರ್ಶನ್ ಹಾಗೂ ಶರತ್ ಹಾಸನಕ್ಕೆ ತೆರಳಿ ಸ್ನೇಹಿತ ಸೂರ್ಯ ಹಾಗೂ ಸಾಧಿಕ್ ಪಾಷನನ್ನು ಕರೆದುಕೊಂಡು ದಾಂಡೇಲಿ, ಜೋಯಿಡಾಗೆ ತೆರಳಿ ಅಲ್ಲಿಂದ ವಾಪಾಸ್ ಬೇರೆ ಕಾರಿನಲ್ಲಿ ಬೆಂಗಳೂರಿಗೆ ಬರುತ್ತಿದ್ದಾಗ ಆರೋಪಿಗಳನ್ನು ಸಿನಿಮಾ ರೀತಿಯಲ್ಲಿ ಮೊಬೈಲ್ ನೆಟ್ವರ್ಕ್ ಆಧರಿಸಿ ಬಂಧಿಸಲಾಗಿದೆ.
ಹೋದಲ್ಲೆಲ್ಲ ಕಳವು! : ನಗರದಲ್ಲಿ ಕಾರು ಕದ್ದು ಪರಾರಿಯಾಗಿದ್ದ ಅರೋಪಿಯನ್ನು ಬಂಧಿಸಿ ವಿಚಾರ ನಡೆಸಿದ್ದಾಗ ಅರೋಪಿಗಳು ಜೋಯಿಡಾದಲ್ಲಿ ಮೊಹಮ್ಮದ್ ಶರ್ೀ ಎಂಬಾತನ ಕಾರಿನಲ್ಲಿ ಗೋವಾಗೆ ತೆರಳಿ ಮದ್ಯ ಖರೀಸಿದ್ದು, ವಾಪಾಸ್ ಜೋಯಿಡಾಗೆ ಬಂದು ಅಲ್ಲೂ ಶರೀಫ್ನ ಮೊಬೈಲ್ ಹಾಗೂ ಕಾರು ಕದ್ದು ಪರಾರಿಯಾಗಿದ್ದಾರೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜತೆಗೆ ದಾಂಡೇಲಿ ಸುತ್ತ್ತಮುತ್ತ ಅರೋಪಿಗಳು ಐದು ಮೊಬೈಲ್ ಕಳವು ಮಾಡಿರುವುದಾಗಿ ಅರೋಪಿಗಳು ಒಪ್ಪಿಕೊಂಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿಗಳ ಶ್ಲಾನೆ : ಆರೋಪಿಗಳನ್ನು ಬಂಧಿಸಿದ್ದ ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ ಭರತ್ಗೌಡ, ಧನರಾಜು, ಎಎಸ್ಐ ರು, ಸಿಬ್ಬಂದಿ ಬಸವರಾಜು, ಪಠಾಣ್, ಹರೀಶ್, ಕೇಶವಮೂರ್ತಿ ಕಾರ್ಯಕ್ಕೆ ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬ ಶ್ಲಾನೆ ವ್ಯಕ್ತಪಡಿಸಿದ್ದಾರೆ.