ದ್ವಿಶತಕದತ್ತ ಸಾವಿನ ಸಂಖ್ಯೆ !

Published on

ಕೋವಿಡ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿ, ಸೀಲ್‌ಡೌನ್ ಮಾಡಲಾಗಿದೆ.

ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 3784 ಸಕ್ರಿಯ ಪ್ರಕರಣಗಳ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 240 ಜನರು, ಕೋವಿಡ್ ಆರೋಗ್ಯ ಕೇಂದ್ರದಲ್ಲಿ 82 ಜನರು, ಕೋವಿಡ್ ಆರೈಕೆ ಕೇಂದ್ರದಲ್ಲಿ 758 ಜನರು, ಖಾಸಗಿ ಆಸ್ಪತ್ರೆಯಲ್ಲಿ 229 ಜನರು, ಹೋಮ್ ಐಸೋಲೇಷನ್‌ನಲ್ಲಿ 2,416 ಜನರು ಮತ್ತು ಖಾಸಗಿ ಕೋವಿಡ್ ಆರೈಕೆ ಕೇಂದ್ರದಲ್ಲಿ 59 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಂಕಿತರ ಸಂಪರ್ಕದಿಂದಾಗಿ 216 ಜನರಿಗೆ, ಅನ್ಯ ರಾಜ್ಯ, ಜಿಲ್ಲೆಗಳಿಂದ ಆಗಮಿಸಿದ್ದ 83 ಜನರಿಗೆ ಮತ್ತು ತೀವ್ರ ಶೀತಜ್ವರ ಮಾದರಿಯ ಸಮಸ್ಯೆಯಿಂದ(ಐಎಲ್‌ಐ) ಬಳಲುತ್ತಿದ್ದ 62 ಜನರಲ್ಲಿ ರೋಗ ಕಾಣಿಸಿಕೊಂಡಿದೆ.

ರೋಗದಿಂದ ಬಳಲುತ್ತಿದ್ದ 38, 40, 46 ವರ್ಷದ ವ್ಯಕ್ತಿಗಳು, 78 ವರ್ಷದ ವೃದ್ಧೆ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದು, ಇವರೆಲ್ಲ ತೀವ್ರ ಉಸಿರಾಟ ಸಮಸ್ಯೆ (ಎಸ್‌ಎಆರ್‌ಐ) ಹೊಂದಿದ್ದರು. ಇದರೊಂದಿಗೆ ಸಾವಿನ ಸಂಖ್ಯೆ 198ಕ್ಕೆ ತಲುಪಿದ್ದು, ಶುಕ್ರವಾರ 200ರ ಗಡಿ ದಾಟುವ ಸಾಧ್ಯತೆ ಇದೆ. ತೀವ್ರ ನಿಗಾ ಘಟಕದಲ್ಲಿ(ಐಸಿಯು) 12 ಜನರು ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯ ಸ್ಥಿತಿಗತಿ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.

ಕರೊನಾ ಆತಂಕದ ನಡುವೆ ಗುರುವಾರ 152 ಜನರು ರೋಗಮುಕ್ತರಾಗಿದ್ದು, ಈವರೆಗೆ 2,494 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 3,784 ಜನರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೊನಾ ಸೋಂಕು ತ್ವರಿತಗತಿಯಲ್ಲಿ ಹೆಚ್ಚುತ್ತಲೇ ಸಾಗಿದ್ದು, ಮತ್ತೆ 361 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಕೋವಿಡ್-19 ಪ್ರಕರಣಗಳ ಸಂಖ್ಯೆ 6,474ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಹೊಸದಾಗಿ ನಾಲ್ವರು ಕರೊನಾಕ್ಕೆ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ದ್ವಿಶತಕದತ್ತ ಸಮೀಪಿಸಿದೆ.

ವಿಜಯವಾಣಿ ಸುದ್ದಿಜಾಲ ಮೈಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net