ಭೀಕರ ಅಪಘಾತದಲ್ಲಿ ನಾಲ್ವರು ದುರ್ಮರಣ

6_BGV_Athani60 CRIME
Published on

ಅಥಣಿ ಗ್ರಾಮೀಣ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೆ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಟನೆ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದ ಹೊರವಲಯದ ಸಂಕೇಶ್ವರ&ಜೇವಗಿ& ರಾಷ್ಟ್ರೀಯ ಹೆದ್ದಾರಿ ಮೇಲೆ ಭಾನುವಾರ ಸಂಭವಿಸಿದೆ.

ಕಲಬುರಗಿ ಜಿಲ್ಲೆಯ ಅಜಲಪುರ ಮೂಲದ ರಾಹುಲ್​ ಮ್ಯಾಳಸಿ (25), ರಾಧಿಕಾ ರಾಹುಲ ಮ್ಯಾಳಸಿ (22), ಗಿರೀಶ ಅಶೋಕ ಬಿಳ್ಳೋರಗಿ (30), ಸಂಗಮೇಶ ಗಿರೀಶ ಅಮರಗೊಂಡ (26) ಮೃತರು. ಕಲಬುರ್ಗಿಯ ವಿನಾಯಕ ಪ್ರಸಾದ ತಿವಾರಿ (30) ಗಾಯಗೊಂಡಿದ್ದು, ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಅಪಘಾತದಲ್ಲಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐವರು ಅಜಲಪುರದಿಂದ ಮಹಾರಾಷ್ಟ್ರದ ಕೊಲ್ಲಾಪುರ ಮಹಾಲಕ್ಷಿ$್ಮ ದೇವಿ ದರ್ಶನ ಪಡೆದು ಮರಳಿ ಕಾಗವಾಡ, ಮುರುಗುಂಡಿ ಮಾರ್ಗವಾಗಿ ಸ್ವಪಟ್ಟಣಕ್ಕೆ ಹೊರಟಿದ್ದ ವೇಳೆ ಈ ದುರ್ಟನೆ ನಡೆದಿದೆ. ಈ ಕುರಿತು ಅಥಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್​ಐ ಗಿರಿಮಲ್ಲಪ್ಪ ಉಪ್ಪಾರ, ತನಿಖಾಸಹಾಯಕ ಭೀಮಸೇನ ಮನ್ನಾಪುರ, ಪಿ.ಸಿ.ಕಂಟಿಗೊಂಡ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net