ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

crime
Published on

ಬೂದಿಕೋಟೆ/ಕಾಮಸಮುದ್ರ: ವಿವಿಧ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ಅಂತಾರಾಜ್ಯ ಆರೋಪಿಗಳನ್ನು ಕಾಮಸಮುದ್ರಂ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸುರೇಶ್​(34), ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸತೀಶ್​(34), ರೂಪೇಶ್​ (28), ವೆಂಕಟರಮಣಪ್ಪ (34) ಬಂಧಿತರು.

ರಾತ್ರಿ ವೇಳೆ ವಾಹನದಲ್ಲಿ ಬಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಕಳವು ಮಾಡಿ ಹೋಗುತ್ತಿದ್ದರು. ಈ ಬಗ್ಗೆ ಕಾಮಸಮುದ್ರ, ಮಾಲೂರು, ತಮಿಳುನಾಡಿನ ಮಹರಾಜ ಕಡೈ ಮತ್ತು ಬೇರಿಕೈ ಪೊಲೀಸ್​ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 5 ಪ್ರಕರಣ ದಾಖಲಾಗಿದ್ದವು.

ಡಿವೈಎಸ್​ಪಿ ಎಸ್​.ಪಾಂಡುರಂಗ ಮತ್ತು ಕಾಮಸಮುದ್ರ ಸಿಪಿಐ ಜಿ.ಸಿ.ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕಾಮಸಮುದ್ರ ಪಿಎಸ್​ಐ ಕಿರಣ್​ಕುಮಾರ್​ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳ ತನಿಖೆಗಿಳಿದು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ ಒಂದು ಟ್ರಾ$್ಯಕ್ಟರ್​ ಮತ್ತು ಟ್ರ್ಯಾಲಿ, ಮೂರು ಸೀಮೆ ಹಸುಗಳು, ನಾಲ್ಕು ಕುರಿಗಳು, 32 ಹಂದಿಗಳು, 3,200 ರೂ. ಸೇರಿ 13,71,200 ರೂ. ಕಳವು ಮಾಲಿನ ಜತೆಗೆ ಕೃತ್ಯಕ್ಕೆ ಉಪಯೋಗಿಸಿದ ಬೊಲೆರೊ ಪಿಕಪ್​ ವಾಹನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಾರ್ಯಾಚರಣೆಯಲ್ಲಿ ವಿಶೇಷ ಅಪರಾಧ ಪತ್ತೆ ತಂಡದ ಸಿಬ್ಬಂದಿ ಮಂಜುನಾಥರಡ್ಡಿ, ಮುನಾವರಪಾಷಾ, ರಾಮರಾವ್​, ರಾಮಕೃಷ್ಣಾರೆಡ್ಡಿ, ಮಂಜುನಾಥ, ಲ್ಮಣ ತೇಲಿ, ಮಾರ್ಕೊಂಡ, ಚಾಲಕ ಗುರುಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net