ಮಾರಾಮಾರಿಯಲ್ಲಿ ನಾಲ್ವರಿಗೆ ಗಾಯ

15 skppm 2
ಘಟನೆಯಲ್ಲಿ ಗಾಯಗೊಂಡಿರುವ ವ್ಯಕ್ತಿಗಳು.
Published on

ಸಕಲೇಶಪುರ: ತಾಲೂಕಿನ ಅಚ್ಚನಹಳ್ಳಿ ಗ್ರಾಮದ ರೆಸಾರ್ಟ್‌ವೊಂದರಲ್ಲಿ ಅತಿಥಿಗಳು ಹಾಗೂ ನೌಕರರ ನಡುವೆ ಮಾರಾಮಾರಿ ನಡೆದು ನಾಲ್ವರು ಗಾಯಗೊಂಡಿರುವುದರ ಜತೆಗೆ ರೆಸಾರ್ಟ್‌ಗೂ ಹಾನಿಯಾಗಿದೆ.

ಭಾನುವಾರ ಮುಂಜಾನೆ ರೆಸಾರ್ಟ್‌ಗೆ ಆಗಮಿಸಿದ್ದ ಮಂಗಳೂರು ಮೂಲದ 36 ಜನರ ತಂಡ ಸ್ವಿಮಿಂಗ್ ಫೂಲ್ ಬಳಸುವ ವಿಚಾರದಲ್ಲಿ ರೆಸಾರ್ಟ್ ನೌಕರರೊಂದಿಗೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ ವೇಳೆ ಒಂದು ತಂಡ ರೆಸಾರ್ಟ್ ಮೇಲೆ ಕಲ್ಲು ತೂರಾಟ ನಡೆಸಿದರೆ ಮತ್ತೊಂದು ತಂಡ ಎದುರಾಳಿಗಳ ಮೇಲೆ ಬ್ಯಾಟ್‌ನಿಂದ ಹಲ್ಲೆ ನಡೆಸಿದೆ. ಪರಿಣಾಮ ರೆಸಾರ್ಟ್‌ನ ಕಿಟಿಕಿ, ಬಾಗಿಲುಗಳ ಗಾಜು ಧ್ವಸಗೊಂಡಿದ್ದರೆ, ಮಹಿಳೆಯರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳು ಹಾನುಬಾಳ್ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net