ಬೀದಿ ನಾಯಿಗಳ ದಾಳಿಯಿಂದ ನಾಲ್ವರಿಗೆ ಗಾಯ

Handcuffs 7
Justice
Published on

ಹನೂರು: ತಾಲೂಕಿನ ಚನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೀದಿ ನಾಯಿಗಳ ದಾಳಿಗೆ 12 ವರ್ಷದ ಬಾಲಕ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಗ್ರಾಮದ ಮಹೇಶ್, ವೆಂಕಟಯ್ಯ, ಸಿದ್ದಯ್ಯ ಹಾಗೂ ಚಂದನ್ ಗಾಯಗೊಂಡವರು. ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ಅಡ್ಡಾಡುತ್ತಿವೆ. ಹೀಗಿರುವಾಗ ಮಂಗಳವಾರ ಮಧ್ಯಾಹ್ನ ಅಡ್ಡಾಡುತ್ತಿದ್ದ ಬೀದಿ ನಾಯಿಗಳನ್ನು ಜನರು ಚದುರಿಸಲು ಯತ್ನಿಸಿದ್ದಾರೆ.

ಈ ವೇಳೆ ನಾಯಿಗಳು ನಾಲ್ವರ ಮೇಲೆ ಎಗರಿ ಕಚ್ಚಿ ಗಾಯಗೊಳಿಸಿದೆ. ಬಳಿಕ ಜನರು ಹೆಚ್ಚು ಸದ್ದು ಮಾಡಿದಾಗ ನಾಯಿಗಳು ಸ್ಥಳದಿಂದ ಕಾಲ್ಕಿತ್ತಿವೆ. ಬಳಿಕ ಗಾಯಾಳುಗಳು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net