ಟ್ಯಾಂಕ್​ ಛಾವಣಿ ಕುಸಿದು ನಾಲ್ವರಿಗೆ ಗಾಯ

Published on

ಪಾವಗಡ: ಪಟ್ಟಣದ ಪುರಸಭೆಯ 14ನೇ ವಾರ್ಡಿನಲ್ಲಿ ಗುರುವಾರ ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್​ ತೆರವುಗೊಳಿಸುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಟ್ಯಾಂಕ್​ನ ಮೇಲ್ಛಾವಣಿಯ ಕುಸಿದು ಬಿದ್ದು ಮೂರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು, ಒಬ್ಬರ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್​ ತೆರವು ವೇಳೆ ಛಾವಣಿ ಕುಸಿದಿದೆ. ಒಬ್ಬ ಕಾರ್ಮಿಕನ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿ ಟ್ಯಾಂಕ್​ನಲ್ಲಿ ಸಿಲುಕಿದ್ದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಣೆ ಮಾಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net