

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಮದ ಕರುಗುಂದ ಸಮೀಪದ ಮುಖ್ಯ ರಸ್ತೆಯಲ್ಲಿ ಶೆಟ್ಟಿಕೊಪ್ಪ ಭಾಗದಿದಂದ ಎನ್.ಆರ್.ಪುರಕ್ಕೆ ಬರುತ್ತಿದ್ದ ವ್ಯಾನ್‌ನ ಮೇಲೆ ರಸ್ತೆಯ ಪಕ್ಕದ ತೋಟದಿಂದ ಕಡುವೆ ಹಾರಿದ ಪರಿಣಾಮ ವ್ಯಾನ್ ಜಖಂಗೊಂಡು ವ್ಯಾನ್‌ನಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಶೆಟ್ಟಿಕೊಪ್ಪ ಭಾಗದಿಂದ ಎನ್.ಆರ್.ಪುರಕ್ಕೆ ಹೋಗುತ್ತಿದ್ದ ವ್ಯಾನ್‌ಗೆ ಕರುಗುಂದ ಸಮೀಪದ ತೋಟದಿಂದ ಕಡುವೆಯೊಂದು ರಸ್ತೆಗೆ ಹಾರಿದೆ. ರಸ್ತೆಯಲ್ಲಿ ಬರುತ್ತಿದ್ದ ವ್ಯಾನ್ ಮೇಲೆ ಕಡುವೆ ಬಿದ್ದಿದೆ. ಇದರಿಂದ ಕಾರಿನಲ್ಲಿ ಕುಳಿತಿದ್ದ ಕೇರಳ ಮೂಲದ ರಬ್ಬರ್ ಟ್ಯಾಪ್ ಮಾಡುವ ನಾಲ್ವರಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.
ಈ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಕಡಹಿನಬೈಲು ಗ್ರಾಪಂ ಪಿಡಿಒ ವಿಂದ್ಯಾ, ಮುತ್ತಿನಕೊಪ್ಪ ಗ್ರಾಪಂ ಬಿಲ್‌ಕಲೆಕ್ಟರ್ ಸುದರ್ಶನ್ ವ್ಯಾನ್ ಬಾಗಿಲು ತೆಗೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ವ್ಯಾನ್ ಜಖಂ ಆಗಿದ್ದರಿಂದ ಬಾಗಿಲು ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಕಡಹಿನಬೈಲು ಗ್ರಾಪಂನ ಅಟೆಂಡರ್ ಜೀವನ್, ವಾಟರ್‌ಮ್ಯಾನ್ ಪುಟ್ಟಸ್ವಾಮಿ, ಗ್ರಾಪಂ ಸದಸ್ಯ ರವೀಂದ್ರ ಹಾಗೂ ಸ್ಥಳೀಯ ನೆರವಿನಿಂದ ವ್ಯಾನ್ ಬಾಗಿಲು ತೆಗೆದು ಗಾಯಗೊಂಡ ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.