ನಾಲ್ವರು ದರೋಡೆಕೋರರ ಬಂಧನ

24murgod1 carim-Web
ರಸ್ತೆಯಲ್ಲಿ ರಾತ್ರಿ ಹೊತ್ತು ದರೋಡೆ ನಡೆಸುವ ನಾಲ್ವರು ಯುವಕರನ್ನು ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿಪಿಐ ಮಂಜುನಾಥ ನಡವಿನಮನಿ, ಪಿಎಸ್‌ಐ ಪ್ರವೀಣ ಗಂಗೋಳ ಇತರರು ಇದ್ದಾರೆ.
Published on

ಮುರಗೋಡ: ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಬೈಲಹೊಂಗಲ ಮುಖ್ಯರಸ್ತೆ ಹಾಗೂ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಅವರಿಂದ ಹಣ ಮತ್ತು ಮೊಬೈಲ್ ದರೋಡೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಸವದತ್ತಿ ತಾಲೂಕಿನ ದೇವೇಂದ್ರ ಲಕ್ಕಪ್ಪ ಶಿನೋಬಿ (19), ದೇವೇಂದ್ರ ವಿಠ್ಠಲ ಸಣ್ಣಮ್ಮನವರ(19), ಶ್ರೀಶೈಲ ವಿಷ್ಣು ಹೊಂಡೆಪ್ಪನವರ(21), ಯಮನಪ್ಪ ಯಲ್ಲನಾಯ್ಕ ಕಡೆಮನಿ(21) ಬಂಧಿತರು. ಮುರಗೋಡದ ಮಹೇಶ ಹಿರೇಮಠ ಎಂಬುವರು ಫೆ. 4ರಂದು ಮುರಗೋಡದಿಂದ ತಮ್ಮ ಹೊಲದ ಮನೆಗೆ ಹೋಗುತ್ತಿರುವಾಗ ಬೈಕ್ ಮೇಲೆ ಬಂದ ಅಪರಿಚಿತ ನಾಲ್ವರು ವ್ಯಕ್ತಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ವಾಹನ ಅಡ್ಡಗಟ್ಟಿ ಚಾಕು ತೋರಿಸಿ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಮುರಗೋಡ ಠಾಣೆ ಪೊಲೀಸರು ಬೆಳಗಾವಿ-ಬಾಗಲಕೋಟೆ ರಸ್ತೆಯ ಹಲಕಿ ಕ್ರಾಸ್ ಬಳಿ ದಾಳಿ ನಡೆಸಿ ದರೋಡೆ ಮಾಡುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸವದತ್ತಿ ಸಿಪಿಐ ಮಂಜುನಾಥ ನಡವಿನಮನಿ, ಪಿಎಸ್‌ಐ ಪ್ರವೀಣ ಗಂಗೋಳ ತನಿಖೆ ನಡೆಸಿ ಬಂಧಿತ ಯುವಕರಿಂದ ಒಟ್ಟು 8 ಮೊಬೈಲ್ ಹಾಗೂ 2 ಬೈಕ್ ಹಾಗೂ 7,800 ರೂ. ಹಣ, ಚಾಕು, ಚೂರಿ ಮತ್ತು ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net