ಜಿಲ್ಲೆಯಲ್ಲಿ ನಾಲ್ಕು ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ

Rain Alert
Published on

ಮಂಡ್ಯ: ಜಿಲ್ಲೆಯಲ್ಲಿ ಮೇ 22ರಿಂದ 25ರವರೆಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿ ನೀಡಿದೆ.

22ರಂದು 12 ಮಿ.ಮೀ, 23ರಂದು 7 ಮಿ.ಮೀ, 24ರಂದು 6 ಮಿ.ಮೀ ಹಾಗೂ 25ರಂದು 12 ಮಿ.ಮೀ ಮಳೆಯಾಗುವ ಸೂಚನೆ ಇದೆ. ಈ ಅವಧಿಯಲ್ಲಿ ಗರಿಷ್ಟ 29 ರಿಂದ 31 ಹಾಗೂ ಕನಿಷ್ಟ 23 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ ಎಂದು ತಿಳಿಸಿದೆ.

ಇನ್ನು ಮಂಗಳವಾರ ಜಿಲ್ಲೆಯಲ್ಲಿ 5.9 ಮಿ.ಮೀ ಮಳೆಯಾಗಿದೆ. ಮಂಡ್ಯ ತಾಲೂಕಿನಲ್ಲಿ 10.9 ಮಿ.ಮೀ, ಮದ್ದೂರಿನಲ್ಲಿ 9.2 ಮಿ.ಮೀ, ಪಾಂಡವಪುರದಲ್ಲಿ 11.3 ಮಿ.ಮೀ, ಕೆ.ಆರ್.ಪೇಟೆಯಲ್ಲಿ 6.1 ಮಿ.ಮೀ, ಶ್ರೀರಂಗಪಟ್ಟಣದಲ್ಲಿ 5 ಮಿ.ಮೀ, ನಾಗಮಂಗಲದಲ್ಲಿ 1.7 ಮಿ.ಮೀ ಹಾಗೂ ಮಳವಳ್ಳಿ ತಾಲೂಕಿನಲ್ಲಿ 0.9 ಮಿ.ಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net