ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಅಭಿವೃದ್ಧಿ

ಹೊಸಪೇಟೆಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಈ.ತುಕಾರಾಂ ಭೂಮಿ ಪೂಜೆ ನೆರವೇರಿಸಿದರು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ನಗರಸಭೆ ಆಯುಕ್ತ ಮನೋಹರ, ನಗರಸಭೆ ಅಧ್ಯಕ್ಷ ರೂಪೇಶ ಕುಮಾರ, ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ ಇತರರಿದ್ದರು.

Published on

ಹೊಸಪೇಟೆ: ಸಂಸದರ ಮೊದಲನೇ ಅನುದಾನದಲ್ಲಿ ಸ್ಥಳೀಯ ನಾಗರಿಕರಿಗೆ ನೆಮ್ಮದಿಯ ವಾತಾವಾರಣ ಕಲ್ಪಿಸಲು, ನಗರ ಸೌಂದರ್ಯದ ಉದ್ದೇಶದಿಂದ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಸಂಸದ ಈ.ತುಕಾರಾಂ ಹೇಳಿದರು.

ನಗರದ ವಿವಿಧ ವಾರ್ಡ್‌ಗಳಲ್ಲಿ ಶನಿವಾರ 4 ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ಉದ್ಯಾನಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಮಕ್ಕಳು, ಮಹಿಳೆಯರು, ವಯೋವೃದ್ಧರು, ನಿವೃತ್ತ ನೌಕರರು ಹಾಗೂ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ವಾಯುವಿಹಾರಕ್ಕೆ ಉದ್ಯಾನ ಸಹಕಾರಿಯಾಗಲಿವೆ. ಪಾರ್ಕ್‌ಗಳಲ್ಲಿ ಮಕ್ಕಳಿಗೆ ಆಟಿಕೆ ವಸ್ತುಗಳು, ಆಸನಗಳು, ವಿದ್ಯುತ್ ದೀಪ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪಿರಮಿಡ್ ಮಾದರಿಯಲ್ಲಿ ಪರಗೋಲು ಸಹಿತ ಉದ್ಯಾನ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜೆ.ಪಿ.ನಗರ, ವಿದ್ಯಾನಗರ, ಬಸವೇಶ್ವರ ಬಡಾವಣೆ, ರಾಜಾಜಿ ನಗರ, ಎಂ.ಪಿ.ಪ್ರಕಾಶ ನಗರದ ಪಾರ್ಕ್‌ಗಳ ಅಭಿವೃದ್ಧಿ ಹಾಗೂ ಮೂರಂಗಡಿ ವೃತ್ತದಿಂದ ಹಂಪಿ ರಸ್ತೆಯ ಮೂಲಕ ಎಂ.ಪಿ.ಪ್ರಕಾಶ ನಗರ ಕ್ರಾಸ್ ವರೆಗೆ ಮತ್ತು ಮಲ್ಲಿಗೆ ಹೊಟೇಲ್ ಮುಂಭಾಗದಿಂದ ಪತ್ತಿಕೊಂಡ ಎನ್‌ಕ್ಲೇವ್‌ವರೆಗೆ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net