ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಹಸು ಕಳವು

Crime Logo
Published on

ಶಿರಸಿ: ಇತ್ತೀಚೆಗಷ್ಟೇ ನಗರ ಪ್ರದೇಶದಲ್ಲಿ ನಡೆದ ಬಿಡಾಡಿ ದನಗಳ ಕಳವಿನ ಬಗ್ಗೆ ಸಾರ್ವಜನಿಕರ ಅಸಮಾಧಾನ ತೀವ್ರವಾಗಿರುವ ಬೆನ್ನಲ್ಲೇ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮತ್ತೆ ಕಳ್ಳತನ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಹಸುಗಳನ್ನು ದುರುಳರು ಹೊತ್ತೊಯ್ದಿದ್ದಾರೆ.

ತಾಲೂಕಿನ ಸಾಲ್ಕಣಿ ಬಳಿಯ ಎಸ್.ಆರ್. ಹೆಗಡೆಯವರಿಗೆ ಸೇರಿದ ಕೊಟ್ಟಿಗೆಯಲ್ಲಿ ಮಂಗಳವಾರ ರಾತ್ರಿ ಕಳವು ನಡೆದಿದೆ. ಎಸ್.ಆರ್. ಹೆಗಡೆ ದೇಶೀ ಗೋ ತಳಿಯನ್ನು ಸಂರಕ್ಷಿಸುವ ಕಾರ್ಯವನ್ನು ಕಳೆದ ಕೆಲ ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕೊಟ್ಟಿಗೆಯಲ್ಲಿ ಅವರು ಈ ಆಕಳುಗಳನ್ನು ಕಟ್ಟುತ್ತಿದ್ದರು. ಇದನ್ನು ಗಮನಿಸಿದ್ದ ದುರುಳರು ರಾತ್ರಿ ವೇಳೆ ನಾಲ್ಕು ಆಕಳುಗಳನ್ನು ಕದ್ದಿದ್ದಾರೆ.

ಈ ಹಿಂದೆ ಬೀಟ್ ವ್ಯವಸ್ಥೆ ಮೂಲಕ ಪೊಲೀಸರು ಗ್ರಾಮೀಣ ಪ್ರದೇಶಗಳಿಗೆ ಸಂಚರಿಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆ ದುರ್ಬಲಗೊಂಡಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಒಂಟಿ ಮನೆಗಳಲ್ಲಿ ಆತಂಕ ವ್ಯಕ್ತವಾಗಿದೆ. ಪೊಲೀಸರು ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿಯೂ ರಾತ್ರಿಯ ವೇಳೆ ಗಸ್ತು ತಿರುಗಬೇಕು, ಗೋ ಕಳ್ಳರನ್ನು ಮಟ್ಟಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net