ಅಂತಾರಾಜ್ಯ ಕಳ್ಳನಿಂದ ನಾಲ್ಕು ಬೈಕ್ ವಶ

Four bikes seized from interstate thief
ರಬಕವಿ/ಬನಹಟ್ಟಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳನನ್ನು ಬಂಧಿಸಿ ನಾಲ್ಕು ಬೈಕ್ ವಶಪಡಿಸಿಕೊಂಡಿರುವುದು. ಡಿವೈಎಸ್‌ಪಿ ಈ. ಶಾಂತವೀರ, ಸಿಪಿಐ ಸಂಜೀವ ಬಳಗಾರ, ಪಿಎಸ್‌ಐ ಶಾಂತ ಹಳ್ಳಿ ಇತರರಿದ್ದಾರೆ.
Published on

ರಬಕವಿ-ಬನಹಟ್ಟಿ: ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತಾರಾಜ್ಯ ಕಳ್ಳನನ್ನು ಬಂಧಿಸಿ, ಆತನಿಂದ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲೂಕಿನ ಹಿಪ್ಪರಗಿ ಗ್ರಾಮದ ಹಿಪ್ಪರಗಿ ಡ್ಯಾಂ ಸಮೀಪ ಸೋಮವಾರ ಸಂಜೆ ವಾಹನ ಪರಿಶೀಲಿಸುವಾಗ ಕಳ್ಳತನ ಮಾಡಿದ್ದ ಬೈಕ್ ಸಮೇತ ಬೆಳಗಾವಿ ಜಿಲ್ಲೆಯ ನಂದೇಶ್ವರ ಗ್ರಾಮದ ವಿಶ್ವನಾಥ ಗುರವ (24) ಎಂಬಾತನನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಸಂದರ್ಭದಲ್ಲಿ ನಾಲ್ಕು ಬೈಕ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿಯಿಂದ ಯಮಾಹಾ, ಹಿರೋ ಸ್ಪ್ಲೆಂಡರ್, ರಾಯಲ್ ಎನ್‌ಫೀಲ್ಡ್ ಹಾಗೂ ಹೊಂಡಾ ಶೈನ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 2,40,000 ರೂ. ಎಂದು ಅಂದಾಜಿಸಲಾಗಿದೆ ಎಂದು ಸಿಪಿಐ ಸಂಜೀವ ಬಳಗಾರ ಮಾಹಿತಿ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ಡಿವೈಎಸ್‌ಪಿ ಈ. ಶಾಂತವೀರ, ಸಿಪಿಐ ಸಂಜೀವ ಬಳಗಾರ ಮಾರ್ಗದರ್ಶನದಲ್ಲಿ ಬನಹಟ್ಟಿ ಪಿಎಸ್‌ಐ ಶಾಂತಾ ಹಳ್ಳಿ, ಪಿಎಸ್‌ಐ ಡಿ.ಬಿ. ಕೊತ್ವಾಲ್ ಹಾಗೂ ತನಿಖಾ ತಂಡ ಎಎಸ್‌ಐ ಎಸ್.ಎಸ್. ಬಾಬಾನಗರ, ಸಿಬ್ಬಂದಿ ಎಂ.ಡಿ. ಸವದಿ, ಡಿ.ಬಿ. ಕುಂಬಾರ, ಶ್ರೀಮಂತ ಹುಕ್ಕೇರಿ, ವಿ.ಎಸ್. ಅಜ್ಜನಗೌಡರ, ಎ.ಎಂ. ಜಮಖಂಡಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net