

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ವಶಪಡಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೋಟಿಕುಳಂ ನಿವಾಸಿ ಇಮ್ತಿಶಾನ್, ಚಿತ್ತಾರಿ ಮುಕ್ಕೂಟ್ ನಿವಾಸಿ ಎಂ.ಕೆ.ಶರ್ಫುದ್ದೀನ್, ಕೋಟಿಕುಳಂ ರೈಲ್ವೆ ನಿಲ್ದಾಣ ಸನಿಹದ ನಿವಾಸಿ ಎಂ.ವಿ.ಮಹಮ್ಮದ್ ಆರಿಫ್, ಕಳನಾಡು ನಿವಾಸಿ ಅಬ್ದುಲ್ ಮುನಾವರ್ ಬಂಧಿತರು. ಕಾಸರಗೋಡು ಭಾಗಕ್ಕೆ ತೆರಳುವ ಪ್ರಯಾಣಿಕರ ತಂಗುದಾಣ ಕಟ್ಟಡ ಬಳಿ ಬುಧವಾರ ರಾತ್ರಿ ಬೇಕಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇವರಿಂದ 0.95 ಗ್ರಾಂ ಎಂಡಿಎಂಎ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.