ಆಡುಗಳನ್ನು ಕಳವು ಮಾಡಿದ್ದ ನಾಲ್ವರ ಬಂಧನ

Published on

ಸುಂಟಿಕೊಪ್ಪ: ತೋಟದಲ್ಲಿ ಸಾಕಣೆ ಮಾಡಿದ್ದ ಆಡುಗಳನ್ನು ಕಳವು ಮಾಡಿದ್ದ ನಾಲ್ವರನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಏಳನೇ ಹೊಸಕೋಟೆ ನಿವಾಸಿಗಳಾದ ಮಂಜುನಾಥ, ಪ್ರತಾಪ್, ರಮೇಶ್ ಹಾಗೂ ಲೋಹಿತ್ ಬಂಧಿತರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಎಂಬುವರಿಗೆ ಸೇರಿದ ಆಡುಗಳನ್ನು ನಾಲ್ವರು ಕಳವು ಮಾಡಿದ್ದರು. ಈ ಸಬಂಧ ಲತೀಫ್ ಅವರು 11 ಆಡುಗಳು ಮತ್ತು ಮರಿಗಳನ್ನು ಕಳವು ಮಾಡಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿ, ಓಮ್ನಿ ವ್ಯಾನನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net