

ರಾಣೆಬೆನ್ನೂರ: ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿಯ ಶಹರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಗೌರಿಶಂಕರ ನಗರದ ಶೇಖಿಲ್ ಮಸ್ಸೂರ ಕಿತ್ತೂರ (23), ಕಿರಣ ಗೋಪಾಲಪ್ಪ ಚವ್ಹಾಣ (27), ವಿದ್ಯಾನಗರದ ಹರೀಶ ನೇತಾಜಪ್ಪ ಮಾಳಗಿ (27), ದೇವೇಂದ್ರ ದಿನಾನಾಥ ಚೌದ್ರಿ (24) ಬಂಧಿತ ಆರೋಪಿಗಳು.
ಇವರು ನಗರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದು ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರ ತಂಡ ಬಂಧಿಸಿದೆ. ನಂತರ ವೈದ್ಯಕಿಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.