ಉತ್ತಮ ಪ್ರಜೆಗಳಾಗಲು ಸ್ಕೌಟ್ಸ್​-ಗೈಡ್ಸ್​ ಸಹಕಾರಿ...

Vidyaranya Lead
Published on

ಡಾ. ರಮೇಶ್​ ಶೆಟ್ಟಿ ಅನಿಸಿಕೆ

ವಿದ್ಯಾರಣ್ಯ ಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

Vidyaranya 2
ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷ್​ ನಿವೃತ್ತ ಅಧಿಕಾರಿ ಪೋವೆಲ್​ ಅವರಿಂದ ಸ್ಥಾಪಿತವಾದ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ ಆಂದೋಲನ ಇಂದು ಜಗತ್ತಿನಾದ್ಯಂತ ಪಸರಿಸಿದೆ. ಯುವ ಸಮುದಾಯ ಅದರಲ್ಲಿಯೂ ವಿದ್ಯಾರ್ಥಿಗಳನ್ನು ಮಾನಸಿಕ, ದೈಹಿಕ ಹಾಗೂ ಬೌದ್ಧಿಕವಾಗಿ ಸದೃಢವಾಗಿಸಿ ಉತ್ತಮ ಪ್ರಜೆಗಳಾಗಿ ರೂಪಿಸಲು ಸಹಕಾರಿಯಾಗಿದೆ ಎಂದು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಸುಜ್ಞಾನ ಎಜುಕೇಶನಲ್​ ಟ್ರಸ್ಟ್​ನ ಅಧ್ಯಕ್ಷ ಡಾ. ರಮೇಶ್​ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು.

ಕುಂದಾಪುರದ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜೀವನದುದ್ದಕ್ಕೂ ಸಾಧನೆಗೆ ಸಹಕಾರಿ

Vidyaranya 3
ಭಾರತದ ಬಹುಪಾಲು ರಾಜ್ಯಗಳಲ್ಲಿ ಇಂದು ಸ್ಕೌಟ್ಸ್​-ಗೈಡ್ಸ್​ ತರಬೇತಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ.ಪ್ರಾಥಮಿಕ ಹಂತದಲ್ಲಿಯೇ ಸ್ಕೌಟ್ಸ್​-ಗೈಡ್ಸ್​ನ ಪರಿಚಯ ಮಾಡಿದರೆ ಉತ್ತಮ ಶಿಸ್ತು, ನಡತೆ ಕಲಿತು ಪಠ್ಯ ಮತ್ತು ಪಠ್ಯೇತರ ವಿಭಾಗದಲ್ಲೂ ಸಾಧನೆ ಮಾಡಲು ಅನುಕೂಲ ಆಗಲಿದೆ. ಜೀವನದುದ್ದಕ್ಕೂ ಅದು ಸಹಕಾರಿಯಾಗುತ್ತದೆ ಎಂದರು.

ಮಕ್ಕಳಿಂದ ಕಸರತ್ತು

Vidyaranya 4
ಕಾರ್ಯಕ್ರಮದಲ್ಲಿ ಮಕ್ಕಳು ಸಾಹಸದ ಕಸರತ್ತು ನಡೆಸಿದರು. ಬೆಂಕಿ ಬಳಸದೆ ಮತ್ತು ಬೆಂಕಿ ಬಳಸಿ ವಿವಿಧ ತಿಂಡಿ-ತಿನಿಸು, ಖಾದ್ಯಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ಧ್ವಜಾರೋಹಣ ಮತ್ತು ಸರ್ವಧರ್ಮ ಪ್ರಾರ್ಥನೆ ನಡೆಯಿತು.

ಟ್ರಸ್ಟ್​ನ ಕಾರ್ಯದರ್ಶಿ ಪ್ರತಾಪ್​ ಚಂದ್ರ ಶೆಟ್ಟಿ, ಖಜಾಂಚಿ ಭರತ್​ ಶೆಟ್ಟಿ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದಿಪ್​ ಕೆ., ವಿದ್ಯಾರ್ಥಿ ಪೋಷಕರಾದ ರಾಜಣ್ಣ, ಸ್ಕೌಟ್ಸ್​ ಮತ್ತು ಗೈಡ್ಸ್​ ವಿಭಾಗದ ಶಿಕ್ಷಕರಾದ ಗಿರೀಶ್​, ಸೂರ್ಯ, ಜಯಲತಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸ್ಕೌಟ್ಸ್​ ಮತ್ತು ಗೈಡ್ಸ್​ ವಿಭಾಗದ ಶಿಕ್ಷಕ ಹರೀಶ್​ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಮಹತ್ವ ವಿವರಿಸಿದರು. ಶಾಲೆಯ ಸಹ ಶಿಕ್ಷಕಿ ಪವಿತ್ರಾ ವಂದಿಸಿದರು. ಕನ್ನಡ ಶಿಕ್ಷಕ ಸಂತೋಷಕುಮಾರ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net