ಶೈಕ್ಷಣಿಕ ಬೆಳವಣಿಗೆಗೆ ಸ್ಮಾರ್ಟ್ ಕಟ್ಟಡ ಅಗತ್ಯ : ಎ.ಕೆ.ಎಂ.ಅಶ್ರಫ್ ಹೇಳಿಕೆ

New Project (14)
Published on

ಮಂಜೇಶ್ವರ: ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸ್ಮಾರ್ಟ್ ಕಟ್ಟಡ ಅತ್ಯವಶ್ಯಕ. ಸರ್ಕಾರದ ಬದ್ಧತೆ ಪ್ರಕಾರ ಇವು ಸದೃಢ ಮೂಲಸೌಕರ್ಯ ಒದಗಿಸುತ್ತವೆ. ನಿರ್ದಿಷ್ಟ ಗುರಿ ಸಾಧಿಸಲು ಎಲ್ಲರ ಸಹಕಾರ ಅಗತ್ಯ. ಈ ಯೋಜನೆ ಸ್ಥಳೀಯ ಅಭಿವೃದ್ಧಿಗೆ ಪ್ರೇರಕ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.

ವರ್ಕಾಡಿ ಗ್ರಾಪಂ ವ್ಯಾಪ್ತಿಯ ಕಜೆಪದವು ಎಂಬಲ್ಲಿ ಚಿಣ್ಣರ ಬೆಳವಣಿಗೆಗೆ ಆಧುನಿಕ ಸೌಕರ್ಯಗಳೊಂದಿಗೆ ಕೂಡಿದ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ ಗುರುವಾರ ಬೆಳಗ್ಗೆ ಶಂಕುಸ್ಥಾಪನೆ ನಡೆಸಿ ಮಾತನಾಡಿದರು.

ವರ್ಕಾಡಿ ಗ್ರಾಪಂ ಅಧ್ಯಕ್ಷೆ ಭಾರತಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಜನಪ್ರತಿನಿಧಿಗಳು, ರಾಜಕೀಯ ನೇತಾರರು, ಗ್ರಾಪಂ ಉಪಾಧ್ಯಕ್ಷ ಸಿದ್ದೀಖ್ ಪಾಡಿ, ಎ.ಎಲ್.ಎಂ.ಎಸ್ಟಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ., ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಸಾಮಾನಿ, ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಪಿ.ಬಿ.ಅಬೂಬಕ್ಕರ್ ಪಾತೂರು, ಪಂಚಾಯಿತಿ ಕಾರ್ಯದರ್ಶಿ ಅಜಿತ್, ಐಸಿಡಿಎಸ್ ಮೇಲ್ವಿಚಾರಕಿ ಬಿಂದು, ಬಿ.ಆಹ್ಮದ್ ಕುಂಞ, ಇಬ್ರಾಹಿಂ ಮುಸ್ಲಿಯಾರ್, ಲತ್ೀ ಕಜೆ, ರಾಜೇಶ್ವರಿ, ಶಶಿಕಲಾ, ಅಭಿವೃದ್ಧಿ ಸಮಿತಿ ಸದಸ್ಯರು, ಕುಟುಂಬಶ್ರೀ ಸದಸ್ಯರು, ಸ್ಥಳೀಯರು ಪಾಲ್ಗೊಂಡರು. ಅಬ್ದುಲ್ ಮಜೀದ್ ಬಿ.ಎ. ಸ್ವಾಗತಿಸಿದರು. ಮಂಜುಳಾ ಎಚ್.ಕೆ. ವಂದಿಸಿದರು.

ಚಿಣ್ಣರ ಬೆಳವಣಿಗೆಗೆ ಸಹಕಾರಿ

ಚಿಣ್ಣರಿಗೆ ಶೈಕ್ಷಣಿಕ, ಆಟದ ಸೌಲಭ್ಯ ಒದಗಿಸುವ ಜತೆಗೆ ಆಧುನಿಕ ವಾತಾವರಣದಲ್ಲಿ ಚಿಣ್ಣರ ಬೆಳವಣಿಗೆಗೆ ಸಹಕಾರಿ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಸ್ಮಾರ್ಟ್ ತಂತ್ರಜ್ಞಾನ ಅಳವಡಿಸಲಾಗಿದೆ. ಇಲ್ಲಿಯ ಸ್ಥಳೀಯರ ಬಹುಕಾಲದ ಬೇಡಿಕೆ ಸಾಕಾರಗೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net