ಮಳಲಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಶಿಲಾನ್ಯಾಸ

New Project (61)
Published on

ಗುರುಪುರ: ಗಂಜಿಮಠ ಗ್ರಾ.ಪಂ.ವ್ಯಾಪ್ತಿಯ ಮಳಲಿ(ಮಣೇಲ್) ದೇವರಗುಡ್ಡೆಯ ಪುರಾತನ ಶ್ರೀ ಸೂರ್ಯನಾರಾಯಣ ದೇವಸ್ಥಾನ ಜೀರ್ಣೋದ್ಧಾರಕ್ಕೆ ಪೊಳಲಿ ಸುಬ್ರಹ್ಮಣ್ಯ ತಂತ್ರಿ ಪೌರೋಹಿತ್ಯದಲ್ಲಿ ಶಿಲಾನ್ಯಾಸ ಶುಕ್ರವಾರ ನೆರವೇರಿತು.

ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ದೈವ-ದೇವರ ಆರಾಧನೆಯ ನಾಡು ತುಳುನಾಡು. ಮಳಲಿಯಲ್ಲಿ ಒಂದು ಕಾಲದಲ್ಲಿದ್ದ ಶ್ರೀ ಸೂರ್ಯನಾರಾಯಣ ದೇವರ ದೇವಸ್ಥಾನ ನಶಿಸಿ ಹೋಗಿದ್ದು, ಇದೀಗ ಎಲ್ಲರೂ ಸೇರಿ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಷಯ. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ದೇವರ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಕ್, ಗಂಜಿಮಠ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎಂ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭಾಸ್ಕರ ಕುಲಾಲ್, ಸಂಚಾಲಕ ಭಾಸ್ಕರ ಭಟ್, ಉದಯಕುಮಾರ್ ಆಳ್ವ, ಪ್ರೇಮಚಂದ್ರ ನಾಯಕ್, ರಾಮಚಂದ್ರ ಅತಿಕಾರಿಬೆಟ್ಟು, ಪದ್ಮನಾಭ ದೇವರಗುಡ್ಡೆ, ಮೋಹನ ದೇವರಗುಡ್ಡೆ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net