

ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದ ನೂತನ ಆಡಳಿತ ಕಚೇರಿ ನಿರ್ಮಾಣದ ಪೂರ್ವಭಾವಿಯಾಗಿ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ಜರುಗಿತು.
ಉದ್ಯಮಿ ಪತ್ತಡ್ಕ ರಾಮ ಭಟ್ ಹಾಗೂ ಪುತ್ತೂರು ನಗರಸಭಾ ಸದಸ್ಯೆ ವಿದ್ಯಾಗೌರಿ ದಂಪತಿ ಶಿಲಾನ್ಯಾಸ ನೆರವೇರಿಸಿದರು.
ವಸ್ಥಾನದ ಆವರಣ ಗೋಡೆ ನಿರ್ಮಾಣಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಉಪಾಧ್ಯಕ್ಷ ವೈ.ಶಂಕರ ಭಟ್ ವಿಟ್ಲ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ವೈ.ಶ್ಯಾಮ ಭಟ್, ಇಂಜಿನಿಯರ್ ಕೆ.ಎನ್.ಭಟ್, ಡಾ.ಪ್ರಕಾಶ್ ವೈ.ಎಚ್, ವೈ.ವಿ.ಸುಬ್ರಹ್ಮಣ್ಯ ಭಟ್, ಡಾ.ವೈ.ವಿ.ಕೃಷ್ಣಮೂರ್ತಿ, ಜತೆಕಾರ್ಯದರ್ಶಿ ಬಾಲಕೃಷ್ಣ ಕೆ.ಕೆ.ಕುಂಡಾಪು, ಮುರಳೀಕೃಷ್ಣ ಗದ್ದೆಮನೆ ಉಪಸ್ಥಿತರಿದ್ದರು. ಚಂದ್ರಶೇಖರ ಏತಡ್ಕ ಕಾರ್ಯಕ್ರಮ ಸಂಯೋಜಿಸಿದ್ದರು.