ನಿರ್ದಿಷ್ಟ ಗುರಿ, ಛಲವಿದ್ದರೆ ಎಲ್ಲವೂ ಸಾಧ್ಯ

15 dnd 1
Published on

ದಾಂಡೇಲಿ: ನಗರದ ಮೃತ್ಯುಂಜಯ ಮಠದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೀರಶೈವ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಸಮಾಜದ ಅನೇಕರ ಸಹಕಾರದಿಂದ ಕಲ್ಯಾಣ ಮಂಟಪ ನಿರ್ಮಿಸಲಾಗುತ್ತಿದ್ದು, ಬಡ ಜನರಿಗೆ ಸುಪಯೋಗವಾಗಲಿ ಎಂದರು.
ಬಸವೇಶ್ವರ ಸಮಿತಿ ಅಧ್ಯಕ್ಷ ಹಾಗೂ ದಾಂಡೇಲಿ ತಾಲೂಕು ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಯು.ಎಸ್. ಪಾಟೀಲ ಮಾತನಾಡಿ, ನಿರ್ದಿಷ್ಟ ಗುರಿ ಮತ್ತು ಕಾರ್ಯಸಾಧನೆಯ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಸಮಾಜದ ಹಿರಿಯ ಸದಸ್ಯ ರಾಘವೇಂದ್ರ ಗಡೆಪ್ಪನವರ ಮಾತನಾಡಿ, ಕಲ್ಯಾಣ ಮಂಟಪ ನಿರ್ಮಾಣ ಆಗುತ್ತಿರುವುದು ಸಂತೋಷದ ಸಂಗತಿ. ಎಲ್ಲರಿಗೂ ಇದರ ಪ್ರಯೋಜನ ಸಿಗುವಂತಾಗಲಿ ಎಂದು ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ಕೆ.ಬಿ. ನಂಜುಡಪ್ಪ, ಮಾಜಿ ಗೌರವಾಧ್ಯಕ್ಷ ಸಿ.ಎಸ್. ವಸ್ತ್ರದ, ಉಪಾಧ್ಯಕ್ಷ ನಂದೀಶ ಮುಂಗರವಾಡಿ, ಕಾರ್ಯದರ್ಶಿ ಚಂದ್ರು ಮಾಳಿ, ಸದಸ್ಯರಾದ ಲಿಂಗಯ್ಯ ಪೂಜಾರ, ಮಹಾದೇವಪ್ಪ ಅಂದಾಕಾರ, ರುದ್ರಪ್ಪ ತೋಟಗೇರ, ಕಲ್ಲಯ್ಯ ಪೂಜಾರ, ಸಂಜಯ ಕಲ್ಯಾಣಿಮಠ, ಸಿದ್ದಲಿಂಗ ಕೊಟಗಿ, ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಸಮಿತಿ ಸದಸ್ಯರಾದ ಶಿವಬಸಪ್ಪ ನರೇಗಲ್, ಮಹಾಂತೇಶ ಬಾದಾಮಿ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net