ಹೆಬ್ಬಾಳ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ|Foundation stone

h (4)
Published on

ಬೆಂಗಳೂರು: ನಗರಾಭಿವೃದ್ಧಿ ಸಚಿವ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಸುರೇಶ್(Bairati Suresh) ಕ್ಷೇತ್ರದ

ವಿವಿಧ ಬಡಾವಣೆಗಳಲ್ಲಿ ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್, ಕೊಳವೆ ಬಾವಿ ಕೊರೆಯುವ ಕಾಮಗಾರಿಗಳಿಗೆ(Foundation stone laid for various works in Hebbal constituency) ಶಂಕುಸ್ಥಾಪನೆ ನೆರವೇರಿಸಿದರು.

ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣ ಹತ್ತಿರ ಬಳ್ಳಾರಿ ಮುಖ್ಯರಸ್ತೆಯಿಂದ ಅಶ್ವತ್ ನಗರ-ಗೆದ್ದಲಹಳ್ಳಿ-ನಾಗಶೆಟ್ಟಿಹಳ್ಳಿ-ಭದ್ರಪ್ಪ ಲೇಔಟ್ ವರೆಗೆ, ವಿ.ನಾಗೇನಹಳ್ಳಿ ವಾರ್ಡ್‌ನ ಚರ್ಚ್ ಹತ್ತಿರ ಹೆಬ್ಬಾಳದಿಂದ ವಿ.ನಾಗೇನಹಳ್ಳಿ-ಕನಕನಗರವರೆಗೆ ಮತ್ತು ವಿ.ನಾಗೇನಹಳ್ಳಿಯಿಂದ ಸುಲ್ತಾನ್ ಪಾಳ್ಯವರೆಗೆ 300ಎಂಎಂ ಆರ್‌ಸಿಸಿ ಒಳಚರಂಡಿ ಪೈಪ್ ಲೈನ್ ಹಾಗೂ 300ಎಂಎಂ 100ಎಂಎಂ ಕಾವೇರಿ ಕುಡಿಯುವ ನೀರಿನ ಪೈಪ್ ಲೈನ್, ಜೆಸಿ ನಗರ ವಾರ್ಡ್‌ನ ರಾಧಾಕೃಷ್ಣ ಥಿಯೇಟರ್ ಹತ್ತಿರ ನೂತನ ಬೋರ್ ವೆಲ್ ಕೊರೆಯುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರು, ಹೆಬ್ಬಾಳ ಹಾಗೂ ಆರ್.ಟಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಪಕ್ಷದ ಮುಖಂಡರು, ಬಿಬಿಎಂಪಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಬೋರ್ ವೆಲ್ ವಿಭಾಗದ ಇಲಾಖೆ ಅಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net