

ಕಡಬ: ಕಾಲೇಜಿನ ಸಂಪರ್ಕ ರಸ್ತೆ ಚೆನ್ನಾಗಿದ್ದಾಗ ಕಾಲೇಜು ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಬಹುದಿನಗಳ ಬೇಡಿಕೆಯಾದ ಕಾಣಿಯೂರಿನ ಹೃದಯ ಭಾಗದಲ್ಲಿರುವ ಕಾಲೇಜಿನ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕಾಲೇಜು ಕಟ್ಟಡ ದುರಸ್ತಿಗೆ ಈಗಾಗಲೇ ಅನುದಾನ ಒದಗಿಸಲಾಗಿದೆ. ಹೊಸ ಕಟ್ಟಡಕ್ಕೆ ಸಂಬಂಧಪಟ್ಟ ಪ್ರಸ್ತಾವನೆಯನ್ನು ಸಚಿವರಿಗೆ ಕಳುಹಿಸಲಾಗಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಕಾಣಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಾಣಿಯೂರು ಗ್ರಾಪಂ ಅಧ್ಯಕ್ಷ ವಿಶ್ವನಾಥ ಕೊಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಗಣೇಶ್ ಉದನಡ್ಕ, ಕಾಣಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಕಾರ್ಯಾಧ್ಯಕ್ಷೆ ಪ್ರಮೀಳಾ ಜನಾರ್ದನ, ಕಾಣಿಯೂರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ನಿರಂಜನ್ ಆಚಾರ್ ಕೆನ್ನಾರು, ಕಾಣಿಯೂರು ಗ್ರಾಪಂ ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ದೇವಿಪ್ರಸಾದ್ ದೋಳ್ಪಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕುಟ್ರಪ್ಪಾಡಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ದೇಂತಾರು, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಕೃಷ್ಣ ಎಂ.ಆರ್., ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕ ಸುಂದರ ಬೆದ್ರಾಜೆ, ಪ್ರಮುಖರಾದ ಧನಂಜಯ ಕೇನಾಜೆ, ಪರಮೇಶ್ವರ ಅನಿಲ, ದಿನೇಶ್ ಕುಕ್ಕುನಡ್ಕ, ಯಶೋದ ನೇರೋಳ್ತಡ್ಕ, ಲಕ್ಷ್ಮಣ ಗೌಡ ಮುಗರಂಜ, ಉಮೇಶ್ ಬೀರುಕುಡಿಕೆ, ಭವಿತ್ ಕೂರೇಲು, ಆನಂದ ಬನೇರಿ, ಧರ್ಮಪಾಲ ಕಂಪ, ಲೋಕೇಶ್ ಎಣ್ಮೂರು ಉಪಸ್ಥಿತರಿದ್ದರು. ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗಣೇಶ್ ಉದನಡ್ಕ ಸ್ವಾಗತಿಸಿದರು. ಕಾಣಿಯೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಜಯಂತಿ ವಂದಿಸಿದರು.