ಕಾನ ಮಠ ಗುರು ಭವನಕ್ಕೆ ಶಂಕುಸ್ಥಾಪನೆ

New Project (46)
Published on

ಕುಂಬಳೆ: ಕಾನ ಶ್ರೀ ಶಂಕರನಾರಾಯಣ ಮಠ ಶ್ರೀ ಧೂಮಾವತಿ ಅಮ್ಮನವರ ದೈವ ಕ್ಷೇತ್ರಕ್ಕೆ ಸಂಬಂಧಿಸಿ ಮಠದ ಶ್ರೀ ಧೂಮಾವತಿ ದೈವದ ಭಂಡಾರ ಮನೆಯ ಮುಂಭಾಗದಲ್ಲಿ ಮೂಡ ಕೋಣಮ್ಮೆ ವೆಂಕಟರಮಣ ಭಟ್ಟರು ದಾನವಾಗಿ ನೀಡಿದ ಭೂಮಿಯಲ್ಲಿ ಶ್ರೀ ರಾಮಚಂದ್ರಾಪುರ ಸಂಸ್ಥಾನದವರ ಮೊಕ್ಕಾಂ ಮತ್ತು ಕಾನ ಮಠದ ಭಜಕರ ಉಪಯೋಗಕ್ಕಾಗಿ ಗುರುಭವನ ಸಹಿತವಾದ ಸಭಾಭವನಕ್ಕೆ ಶಂಕುಸ್ಥಾಪನೆ ಬುಧವಾರ ನೆರವೇರಿತು.

ಕ್ಷೇತ್ರಾಚಾರ್ಯ ಗುಣಾಜೆ ಭಟ್ ನೇತೃತ್ವದಲ್ಲಿ ಗಣಪತಿ ಪೂಜೆ, ಪ್ರಾರ್ಥನೆ, ವಾಸ್ತುಪೂಜೆ, ಪ್ರಾರ್ಥನೆ, ದೇವರಿಗೆ ಪೂಜೆ, ಶಂಕುಸ್ಥಾಪನೆ ನಡೆಯಿತು. ಮುಖ್ಯ ಅರ್ಚಕರಾದ ಕೇಶವಪ್ರಸಾದ್ ನಾಣಿತ್ತಿಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಲರಾಮ ಭಟ್ ಕಾಕುಂಜೆ, ಕಾರ್ಯದರ್ಶಿ ಮಹೇಶ್ ಭಟ್ ಕೆ., ಕೋಶಾಧಿಕಾರಿ ರವಿಶಂಕರ ಭಟ್ ಉಪ್ಪಂಗಳ, ಶ್ರೀ ರಾಮಚಂದ್ರಾಪುರ ಮಠದ ಪ್ರತಿನಿಧಿಗಳಾದ ಯು.ಎಸ್.ಗಣೇಶ್ ಭಟ್ ಶಿರಂಕಲ್ಲು, ಮಾತೃತ್ವಂ ಪ್ರಧಾನೆ ಈಶ್ವರಿ ಬೇರ್ಕಡವು, ವಲಯಾಧ್ಯಕ್ಷ ಡಾ.ಡಿ.ಪಿ.ಭಟ್ ಕುಂಬಳೆ, ಮುಳ್ಳೇರಿಯಾ ಮಂಡಲ ಸಂಟನಾ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಸ್ಥಳ ದಾನಿ ಮೂಡುಕೋಣಮ್ಮೆ ವೆಂಕಟರಮಣ ಭಟ್ ದಂಪತಿ, ಡಾ.ನವೀನಕೃಷ್ಣ, ಮುಖಂಡರಾದ ಸತ್ಯಶಂಕರ ಭಟ್ ಹಿಳ್ಳೆಮನೆ, ಶಿವಶಂಕರ ಭಟ್ ಬೋನಂತಾಯ, ಪ್ರಮುಖರಾದ ಪ್ರಕಾಶ್ ಪಿ.ಎಸ್., ಪತ್ರಕರ್ತ ಪ್ರಕಾಶ್ ಇಳಂತಿಲ, ಕೆ.ಎಸ್.ಇ.ಬಿ. ಹಿರಿಯ ಅಭಿಯಂತರ ನಾಗರಾಜ ಭಟ್, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಮಹಾಲಿಂಗೇಶ್ವರ ರಾಜ್, ಕರ್ಣಾಟಕ ಬ್ಯಾಂಕ್ ನಿವೃತ್ತ ಜಿ.ಎಂ ಏಳ್ಕಾನ ಮಹಾಲಿಂಗೇಶ್ವರ ಭಟ್, ಮೇಣ ಗೋಪಾಲಕೃಷ್ಣ ಮಧುವನ, ಮಹೇಶ್ ಭಟ್ ಕಟ್ಟಂಪಾಡಿ, ಅಶ್ವಿನಿ ನಾಣಿತ್ತಿಲು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net