ಡಾಂಬರು ರಸ್ತೆ ಕಾಮಗಾರಿಗೆ ಶಿಲಾನ್ಯಾಸ

21
Published on

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯಿಂದ ಸರ್ಕಲ್‌ವರೆಗಿನ 255 ಮೀಟರ್ ರಸ್ತೆಗೆ ಪುನಃ ಡಾಂಬರು ಅಳವಡಿಸುವ ಕಾಮಗಾರಿಗೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಪದೇಪದೆ ರಸ್ತೆಯಲ್ಲಿ ಹೊಂಡಗುಂಡಿಗಳು ಕಾಣಿಸಿಕೊಂಡು ಈ ಭಾಗದ ಪ್ರಯಾಣಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದ ಈ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ. ಅನುದಾನ ಇರಿಸಿದ್ದು, 255 ಮೀಟರ್ ಉದ್ದದ ರಸ್ತೆಗೆ ಗುಣಮಟ್ಟದ ಡಾಂಬರು ಅಳವಡಿಸಲು ಸೂಚಿಸಿದ್ದೇನೆ. ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸುವ ಪ್ರಯತ್ನದ ನಡುವೆ ಈ ಕಾಮಗಾರಿ ತಾತ್ಕಾಲಿಕ ನೆಲೆಯದ್ದಾಗಿದೆ ಎಂದರು.

ಮುರಳೀಧರ ರೈ ಮಠಂತಬೆಟ್ಟು, ಯು.ಟಿ.ತೌಷಿಫ್, ಶಬೀರ್ ಕೆಂಪಿ, ಅಬ್ದುಲ್ ರಹಿಮಾನ್, ಮಜೀದ್, ಆದಂ ಕೊಪ್ಪಳ, ಲೋಕೋಪಯೋಗಿ ಇಲಾಖಾ ಅಭಿಯಂತ ಕಾನಿಷ್ಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net