ರಸ್ತೆ ವಿಸ್ತರಣೆ ಕಾಮಗಾರಿಗೆ ಶಿಲಾನ್ಯಾಸ

Mul_Road work
Published on

ಮೂಲ್ಕಿ: ಮಾನಂಪಾಡಿ ಲೋಕೋಪಯೋಗಿ ಇಲಾಖಾ ರಸ್ತೆಗೆ ಒಂದು ಕೋಟಿ ಹತ್ತು ಲಕ್ಷ ರೂ. ಅನುದಾನದಲ್ಲಿ ರಸ್ತೆ ವಿಸ್ತರಣೆ ಮತ್ತು ಡಾಂಬರು ಕಾಮಗಾರಿಗೆ ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.

ಮುಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷರಾದ ಸುಭಾಷ್ ಶೆಟ್ಟಿ, ಸುನೀಲ್ ಆಳ್ವ, ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯ ಜಯಕುಮಾರ್ ಮಟ್ಟು, ತಾಪಂ ಮಾಜಿ ಅಧ್ಯಕ್ಷ ರಂಗನಾಥ ಶೆಟ್ಟಿ, ಉದ್ಯಮಿಗಳಾದ ವಾಸು ಎಸ್.ಪೂಜಾರಿ, ದೇವಪ್ರಸಾದ್ ಕೆಂಪುಗುಡ್ಡೆ, ಗುತ್ತಿಗೆದಾರ ಸತೀಶ್ ಕುಮಾರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net