ಗ್ರಾಮಾಂತರ ಭಾಗದ ಉನ್ನತಿ ಶ್ರಮ : ರಸ್ತೆ, ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಸಂಸದ ಬ್ರಿಜೇಶ್ ಚೌಟ ಭರವಸೆ

Bel_Road Work 12
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಗ್ರಾಮಾಂತರ ಪ್ರದೇಶದ ಉನ್ನತಿಗೆ ಹಗಲು ರಾತ್ರಿ ದುಡಿಯುವ ಸಂಕಲ್ಪ ನನ್ನದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು. ಶನಿವಾರ ಪಿ.ಎಂ.ಜನಮನ್ ಯೋಜನೆಯಡಿ 6.8 ಕೋಟಿ ರೂ. ವೆಚ್ಚದ ಸುಲ್ಕೇರಿ ಗ್ರಾ.ಪಂ.ನ ಸುಲ್ಕೇರಿಯಿಂದ ಅಂಟ್ರಿಂಜೆ ತನಕದ ರಸ್ತೆ ಅಭಿವೃದ್ಧಿ ಹಾಗೂ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ, ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯಾನಂದ ಗೌಡ, ಸುಲ್ಕೇರಿ ಪಂಚಾಯಿತಿ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ಶುಭಕರ ಬಂಗೇರ, ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ, ಯಶೋದ ಎಲ್.ಬಂಗೇರ, ಬಿಜೆಪಿ ಮುಖಂಡ ಸದಾನಂದ ಪೂಜಾರಿ ಉಂಗಿಲಬೈಲು, ಉದ್ಯಮಿ ಸುಂದರ ಶೆಟ್ಟಿ, ಬ್ಯಾಂಕ್ ಉದ್ಯೋಗಿ ಸುಧೀರ್ ಸೂರ್ಯನಾರಾಯಣ ಕೃಪಾ, ಶಿರ್ಲಾಲು ಹಾ.ಉ ಸಂಘದ ಅಧ್ಯಕ್ಷ ಮಾಧವ ಶಿರ್ಲಾಲು, ತಾ.ಪಂ ಮಾಜಿ ಸದಸ್ಯ ಸುಧೀರ್ ಆರ್.ಸುವರ್ಣ, ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ, ಸುಲ್ಕೇರಿ ಗ್ರಾ.ಪಂ ಸದಸ್ಯರಾದ ಪೂರ್ಣಿಮಾ, ಪ್ರೇಮಾ, ಪ್ರಮುಖರಾದ ಎಚ್.ಎಲ್.ರಾವ್, ರಾಜು ಪೂಜಾರಿ, ಮೋಹನ್ ಅಂಡಿಂಜೆ, ಯೋಗೀಶ್ ಪೂಜಾರಿ ಬೊಳುವಾಲ್, ಇಂಜಿನಿಯರ್ ರಾಜಾರಾಮ್, ಗುತ್ತಿಗೆದಾರ ನವೀನ್ ಹೆಗ್ಡೆ ಕಾರ್ಕಳ, ಪಾರ್ಶ್ವನಾಥ ಜೈನ್, ವಸಂತ ಪೂಜಾರಿ, ಗಣೇಶ್ ಹೆಗ್ಡೆ ನಾರಾವಿ, ಜಗದೀಶ್ ಹೆಗ್ಡೆ ಕೊಕ್ರಾಡಿ, ವಿಜಯ ಗೌಡ ವೇಣೂರು, ಅರುಣ್ ಕುಲಾಲ್ ಮುಡಿಪಿರೆ, ಸಂಜೀವ ಶೆಟ್ಟಿ ಸುಲ್ಕೇರಿ, ಬಾಲಕೃಷ್ಣ ಮನ್ನಡ್ಕ, ಕೆ.ಸತ್ಯನಾರಾಯಣ ನೆಕ್ಕಿನಡ್ಕ, ನಾರಾಯಣ ಕೊರಗ ಅಂಟ್ರಿಂಜೆ, ವಿಶ್ವನಾಥ ಶೆಟ್ಟಿ, ವಾಸು ಭಟ್, ರಮಾನಾಥ ಪೂಜಾರಿ, ರಾಜು ಪೂಜಾರಿ ಪೆರಾಡಲು ಹಾಗೂ ಇತರರು ಉಪಸ್ಥಿತರಿದ್ದರು. ವಿಜಯ್ ಕುಮಾರ್ ಜೈನ್ ನಿರೂಪಿಸಿ, ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net