ಕವತ್ತಾರಲ್ಲಿ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ

New Project (26)
Published on

ಕಿನ್ನಿಗೋಳಿ: ಕವತ್ತಾರು ಸಿರಿ ಅಬ್ಬಗ ದಾರಗ ಶ್ರೀ ಮಹಾಂಗೇಶ್ವರ ದೇವಸ್ಥಾನ ಆದಿ ಅಲಡೆ ಪರಿವಾರ ದೈವಗಳಾದ ಭೂತರಾಜ ಮೈಸಂದಾಯ ಜುವಾದಿ, ಜಾರಂದಾಯ, ಪಂಜುರ್ಲಿ, ರಕ್ತೇಶ್ವರಿ ಮತ್ತಿತರ ದೈವೀ ಸಾನ್ನಿಧ್ಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಶುಕ್ರವಾರ ನಡೆಯಿತು.

ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.

ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕರಾದ ವಿಷ್ಣುರಾಜ ಭಟ್, ವಿಶ್ವೇಶ್ವರ ಭಟ್, ಸುಬ್ರಮಣ್ಯ ಭಟ್ ದೇಂದಡ್ಕ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ, ಡಾ.ನಿತ್ಯಾನಂದ ಶೆಟ್ಟಿ, ಅಶೋಕ್ ಶೆಟ್ಟಿ, ಪುತ್ತೂರ ಬಾವ ಮೋಹನ್ ಶೆಟ್ಟಿ, ಗರುಡಾಡಿ ಚಾಮುಂಡೇಶ್ವರಿ ಕ್ಷೇತ್ರದ ವಿಠಲ ಪೂಜಾರಿ, ಕೋಶಾಧಿಕಾರಿ ದೇವಿ ಪ್ರಸಾದ ಅಜಿಲ, ಪದ್ಮನಾಭ ಪಂಬದ, ಶರತ್ ಅಜಿಲ, ಶೋಧನ್ ಅಜಿಲ, ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ, ದೇವಿಕಾ ಶೆಟ್ಟಿ, ಜಯ ಪೂಜಾರಿ ಸಾನದ ಮನ್, ಸದಾನಂದ ಶೆಟ್ಟಿ ಕವತ್ತಾರು, ಸ್ವರಾಜ್ ಶೆಟ್ಟಿ ಮುಂಡ್ಕೂರು, ಸಾಯಿನಾಥ ಶೆಟ್ಟಿ ಮುಂಡ್ಕೂರು, ಶರತ್ ಶೆಟ್ಟಿ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net