ಫುಟ್‌ಬಾಲ್ ಟರ್ಫ್‌ಕೋರ್ಟ್‌ಗೆ ಶಂಕುಸ್ಥಾಪನೆ

15 ckm 4
ಚಿಕ್ಕಮಗಳೂರಲ್ಲಿ ಫುಟ್‌ಬಾಲ್ ಟರ್ಫ್ ಕೋರ್ಟ್‌ಗೆ ಶಾಸಕ ಎಚ್.ಡಿ.ತಮ್ಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ವರಸಿದ್ಧಿ ವೇಣುಗೋಪಾಲ್, ಅಮೃತೇಶ್ ಚನ್ನಕೇಶವ, ಇಂದಿರಾ ಶಂಕರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬಹುದಿನಗಳ ಬೇಡಿಕೆಯಾಗಿದ್ದ 4.50 ಕೋಟಿ ರೂ. ವೆಚ್ಚದ ಫುಟ್‌ಬಾಲ್ ಟರ್ಫ್ ಕೋರ್ಟ್ ನಿರ್ಮಾಣ ಕಾರ್ಯ ಶಂಕುಸ್ಥಾಪನೆ ನೆರವೇರಿಸುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕಲ್ಯಾಣ ನಗರದಲ್ಲಿ ಲೋಕೋಪಯೋಗಿ ಇಲಾಖೆಯಿಂದ 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಫುಟ್‌ಬಾಲ್ ಟರ್ಫ್ ಕೋರ್ಟ್‌ಗೆ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರದಲ್ಲಿ ಬೇರೆ ಬೇರೆ ಎಲ್ಲ ರೀತಿಯ ಕ್ರೀಡೆಗಳಿಗೆ ಕ್ರೀಡಾಂಗಣವಿವೆ. ಆದರೆ ಫುಟ್‌ಬಾಲ್ ಕ್ರೀಡೆಗೆ ಕೋರ್ಟ್ ಇರಲಿಲ್ಲ. ಈ ನಿಟ್ಟಿನಲ್ಲಿ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಿ ಶೀಘ್ರವೇ ಫುಟ್‌ಬಾಲ್ ಕ್ರೀಡಾಪಟುಗಳಿಗೆ ಅರ್ಪಿಸಿ ಕ್ರೀಡಾಭಿಮಾನಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫುಟ್‌ಬಾಲ್ ಕ್ರೀಡಾಂಗಣ ಕಾಮಗಾರಿ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ, ಆದಷ್ಟು ಬೇಗ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳಬೇಕು. ಈ ಫುಟ್‌ಬಾಲ್ ಕ್ರೀಡಾಂಗಣಕ್ಕೆ ಮತ್ತು ಒಳಾಂಗಣ ಕ್ರೀಡಾಂಗಣಕ್ಕೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕಾಯ್ದಿರಿಸಲಾಗಿತ್ತು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net