ವಿಶ್ವಕರ್ಮ ಸಂಘದ ಪದಗ್ರಹಣ

padagrahana
ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ಸಂಘ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು
Published on

ಕೊಕ್ಕರ್ಣೆ: ಶ್ರೀ ವಿಶ್ವಕರ್ಮ ಯುವ ಸಂಘಟನೆ, ಮಹಿಳಾ ಸಂಘಟನೆ ಮಂದಾರ್ತಿ ವತಿಯಿಂದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ಸಂಘದ ಪದಾಧಿಕಾರಿಗಳ ಪದಗ್ರಹಣ ಸೋಮವಾರ ಶ್ರೀ ಕಲ್ಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಶ್ರೀ ವಿಶ್ವಕರ್ಮ ಯುವ ಸಂಘಟನೆ ಮಂದಾರ್ತಿ ವಿಜಯ್ ಆಚಾರ್ಯ ಎಂ.ಆರ್. ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮಾರ್ಗದರ್ಶಕ ಸಂತೋಷ ಪುರೋಹಿತರು ಉಡುಪಿ ಸಮಾಜದಲ್ಲಿ ನಮ್ಮ ಪಾತ್ರ ವಿಷಯದ ಕುರಿತು ಧಾರ್ಮಿಕ ಪ್ರವಚನಗೈದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲಾಧ್ಯಕ್ಷ ರಮೇಶ ಆಚಾರ್ ನೇರಂಬಳ್ಳಿ, ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರಕೂರು ಮಹಿಳಾ ಪ್ರತಿನಿಧಿ ಮಾಲತಿ ಪ್ರಭಾಕರ ಆಚಾರ್ಯ, ಶ್ರೀ ವಿಶ್ವಕರ್ಮ ಮಹಿಳಾ ಸಂಘಟನೆ ಮಂದಾರ್ತಿ ಅಧ್ಯಕ್ಷೆ ಸಂಜೀವಿನಿ ಎನ್.ಆಚಾರ್ಯ, ಮಹಾಬಲ ಆಚಾರ್ಯ ಕಟ್ಟೆಜೆಡ್ಡು ಮತ್ತಿತರರು ಉಪಸ್ಥಿತರಿದ್ದರು. ಸೃಷ್ಟಿ ಆಚಾರ್, ಆದ್ಯಾ ಆಚಾರ್ ಪ್ರಾರ್ಥಿಸಿದರು. ಕೇಶವ ಆಚಾರ್ಯ ಸ್ವಾಗತಿದರು. ಸತೀಶ್ ಆಚಾರ್ಯ ನಡೂರು ವರದಿ ವಾಚಿಸಿದರು. ನಾರಾಯಣ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಕೇಶವ ಆಚಾರ್ಯ ಮಂದಾರ್ತಿ ನಿರೂಪಿಸಿದರು. ಶ್ರೀ ವಿಶ್ವಕರ್ಮ ಯುವ ಸಂಘಟನೆ ಹಾಗೂ ಮಹಿಳಾ ಸಂಘಟನೆ ಮಂದಾರ್ತಿ ಘಟಕ ಪದಾಧಿಕಾರಿಗಳು, ಸದಸ್ಯರು, ಸಮಾಜ ಭಾಂದವರು ಉಪಸ್ಥಿತರಿದ್ದರು. ನೂತನ ಕಮಿಟಿ ಅಧ್ಯಕ್ಷರಾಗಿ ಸತೀಶ್ ಆಚಾರ್ಯ ನಡೂರು, ಪ್ರಧಾನ ಕಾರ್ಯದರ್ಶಿ ರವಿ ಆಚಾರ್ಯ ಮಂದಾರ್ತಿ, ಕೋಶಾಧಿಕಾರಿ ಆದರ್ಶ ಆಚಾರ್ಯ ಮಂದಾರ್ತಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net