ಕ್ಷೇತ್ರಗಳಿಗೆ ಮೊಗೇರರ ಕೊಡುಗೆ ಅಪಾರ : ಬ್ರಹ್ಮರಗುಂಡದಲ್ಲಿ ಎಡನೀರು ಶ್ರೀ ಶುಭನುಡಿ

2
Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ತುಳುನಾಡಿನ ಧಾರ್ಮಿಕ ಇತಿಹಾಸದಲ್ಲಿ ಮೊಗೇರ ಸಮುದಾಯದ ಕೊಡುಗೆ ಅಪಾರ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.

ಆಲಂಕಾರು ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ವತಿಯಿಂದ ಆದಿ ನಾಗಬ್ರಹ್ಮ ಮೊಗೇರ್ಕಳ ಮೂಲಸ್ಥಾನ ನಿಡ್ಪಳ್ಳಿ ಗ್ರಾಮದ ಬ್ರಹ್ಮರಗುಂಡದಲ್ಲಿ ನಿರ್ಮಾಣಗೊಳ್ಳಲಿರುವ ಕೆಂಪು ಕೇಪುಲಾಜೆ ಬೆಮ್ಮೆರ ಗುಂಡ ಮತ್ತು ಶ್ರೀ ಮೊಗೇರ ದೈವಸ್ಥಾನಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ, ಮಾಜಿ ಸಚಿವ ಎಸ್.ಅಂಗಾರ, ಮಾಜಿ ಶಾಸಕರಾದ ಶಕುಂತಳಾ ಟಿ.ಶೆಟ್ಟಿ, ಸಂಜೀವ ಮಠಂದೂರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ನಿಡ್ಪಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿದರು.

ಆದಿನಾಗಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಅಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಸಂಚಾಲಕ ಡಾ.ರು ಬೆಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮೊಗೇರ ಸಂಘ ಅಧ್ಯಕ್ಷ ನಂದರಾಜ ಸಂಕೇಶ, ಮಾಜಿ ಅಧ್ಯಕ್ಷ ಸುಂದರ ಹೊಸಬೆಟ್ಟು, ಮೊಗೇರ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಗೌರವಾಧ್ಯಕ್ಷ ಬಾಬು ಪಚಲಂಪಾರೆ, ಮಂಗಳೂರು ತಾಲೂಕು ಮೊಗೇರ ಸಂಘ ಅಧ್ಯಕ್ಷ ಸೀತಾರಾಮ ಕೊಂಚಾಡಿ, ಹಾಸನ ಜಿಲ್ಲಾ ಮೊಗೇರ ಸಂಘ ಅಧ್ಯಕ್ಷ ಕೃಷ್ಣ ಕಾಟ್ಟಳ್ಳಿ, ಕೊಡಗು ಮೊಗೇರ ಸಂಘ ಅಧ್ಯಕ್ಷ ಜನಾರ್ದನ ಮಡಿಕೇರಿ, ಕಾಸರಗೋಡು ಮೊಗೇರ ಸಂಘ ಅಧ್ಯಕ್ಷ ನಿಟ್ಟೋಣಿ ಬಂದ್ಯೋಡು, ಕಾಸರಗೋಡು ಮೊಗೇರ ಸೊಸೈಟಿ ಅಧ್ಯಕ್ಷ ಬೇಡು, ಚಿಕ್ಕಮಗಳೂರು ಜಿಲ್ಲಾ ಮೊಗೇರ ಸಂಘ ಅಧ್ಯಕ್ಷ ಕೆ.ವಾಣಿ ಕಮ್ಮರಕೋಡು ಮೂಡಿಗೆರೆ, ಕಾಸರಗೋಡು ಮದರು ಮಹಾಮಾತೆ ಮೊಗೇರ ಸಮಾಜದ ಅಧ್ಯಕ್ಷ ವಸಂತ ಅಜಕಕ್ಕೋಡು, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ರವಿ ಪಿ.ಎಂ., ಸೋಮವಾರಪೇಟೆ ಮೊಗೇರ ಸಂಘ ಅಧ್ಯಕ್ಷ ವಸಂತ, ಪುತ್ತೂರು ಮೊಗೇರ ಸಂ ಅಧ್ಯಕ್ಷ ಸುಂದರ ಕೇಪುಳು, ಕೇರಳ ರಾಜ್ಯ ಮೊಗೇರ ಸೊಸೈಟಿ ಅಧ್ಯಕ್ಷ ಲಕ್ಷ್ಮಣ ಪೆರಿಯಡ್ಕ, ಮಂಗಳೂರು ಮುಗೇರ ಸಂ ಅಧ್ಯಕ್ಷ ತುಳಸೀದಾಸ್ ಕೂಳೂರು, ಉಡುಪಿ ಜಿಲ್ಲೆ ಮೊಗೇರ ಸಂಘ ಅಧ್ಯಕ್ಷ ಅಪ್ಪು ಮಾರ್ನೆ, ಬಂಟ್ವಾಳ ಮೊಗೇರ ಸಂಘ ಅಧ್ಯಕ್ಷ ಸುರೇಶ್ ಕುಮಾರ್, ಬೆಳ್ತಂಗಡಿ ಮೊಗೇರ ಹಿತಚಿಂತನ ವೇದಿಕೆ ಅಧ್ಯಕ್ಷ ಕೊರಗಪ್ಪ ಅಳದಂಗಡಿ, ಕಡಬ ಮೊಗೇರ ಸಂಘ ಅಧ್ಯಕ್ಷ ಶಶಿಧರ ಬೊಟ್ಯಡ್ಕ, ಮಂಗಳೂರು ಮೊಗೇರ ಕ್ರೀಡಾ ಸಂಘ ಅಧ್ಯಕ್ಷ ಹರಿದಾಸ್ ಮತ್ತಿತರರು ಉಪಸ್ಥಿತರಿದ್ದರು.

ಆದಿನಾಗ ಬ್ರಹ್ಮ ಮೊಗೇರ್ಕಳ ಸಾಂಸ್ಕೃತಿಕ ಅಧ್ಯಯನ ಟ್ರಸ್ಟ್ ಸಂಚಾಲಕ ವಿಜಯ ವಿಕ್ರಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಕರುಣಾಕರ ಪಲ್ಲತ್ತಡ್ಕ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಹಾಗೂ ಸವಿತಾ ಕಾರ್ಯಕ್ರಮ ನಿರೂಪಿಸಿದರು.

ಧರ್ಮ, ದೇಶದ ಉಳಿವಿಗಾಗಿ ನಮ್ಮ ಕರ್ತವ್ಯದ ಬಗ್ಗೆ ಯೋಚಿಸಬೇಕು. ಧಾರ್ಮಿಕ ಕೇಂದ್ರಗಳಲ್ಲಿ ಅನಗತ್ಯ ಗೊಂದಲ ಸಷ್ಟಿಸಬಾರದು. ಆರಾಧನೆಯ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಮಠ ಮಂದಿರಗಳು ಸದೃಢವಾಗದಿದ್ದರೆ ಹಿಂದು ಸಮಾಜದ ಭದ್ರವಾಗಲು ಸಾಧ್ಯವಿಲ್ಲ. ಜಾತಿಗೊಬ್ಬ ಸ್ವಾಮೀಜಿ ಬದಲು ನೀತಿ ಸಮಾಜ ಕಟ್ಟುವ ಸ್ವಾಮೀಜಿಯ ಅವಶ್ಯಕತೆಯಿದೆ. ಮೋಹನದಾಸ ಸ್ವಾಮೀಜಿ ಮಾಣಿಲ ಶ್ರೀಧಾಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net