ಸನ್ಮಾನ, ಪ್ರತಿಭಾ ಪುರಸ್ಕಾರ ನ. 2ರಂದು

Published on

ಹುಬ್ಬಳ್ಳಿ: ಇಲ್ಲಿಯ ನೇಕಾರನಗರ ದೇವಾಂಗ ಭವನದಲ್ಲಿ ನ. 2ರಂದು ಬೆಳಗ್ಗೆ 11ಗಂಟೆಗೆ ದೇವರ ದಾಸಿಮಯ್ಯ ಭವನ ನಿರ್ವಣಕ್ಕೆ ಅಡಿಗಲ್ಲು, ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರಿಂಗ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಶಾಸಕ ಪ್ರಸಾದ ಅಬ್ಬಯ್ಯ ಅಡಿಗಲ್ಲು ಸಮಾರಂಭ ನೆರವೇರಿಸುವರು. ಧಾರವಾಡ ಜಿಲ್ಲಾ ದೇವಾಂಗ ಸೇವಾ ಸಂಘದ ಅಧ್ಯಕ್ಷ ಡಾ. ಕೆ.ಜಿ ಬ್ಯಾಕೋಡಿ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಸದಸ್ಯೆಯರಾದ ಶಾಂತಾ ಹಿರೇಮಠ ಹಾಗೂ ಶಿವಗಂಗಾಗ ಮಾನಶೆಟ್ಟರ್ ಪ್ರತಿಭಾ ಪುರಸ್ಕಾರ ವಿತರಿಸುವರು. ನಿವೃತ್ತರಾದ ವಾಸು ನಂದರಗಿ, ಜಯಶ್ರೀ ಸುರಪುರ, ನಿರ್ಮಲಾ ಬಳ್ಳಿ, ಗೀತಾ ದೇವಾಂಗಮಠ ಅವರನ್ನು ಸನ್ಮಾನಿಸಲಾಗುವುದು.

ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ ಭಾಪ್ರಿ ಅಧ್ಯಕ್ಷತೆ ವಹಿಸುವರು. ಶ್ರೀ ದೇವಲ ಮಹರ್ಷಿ ಜಯಂತ್ಯುತ್ಸವ ಹಾಗೂ ಶ್ರೀ ಬನಶಂಕರಿ ದೇವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಿಮಿತ್ತ ಬೆಳಗ್ಗೆ 8.30ಕ್ಕೆ ಶ್ರೀ ದೇವಲ ದೇವಾಂಗ ಮಹರ್ಷಿಯ ಭಾವಚಿತ್ರ ಹಾಗೂ ಶ್ರೀ ದೇವಿಯ ಪಾಲಕಿ ಉತ್ಸವ ನೇಕಾರನಗರದಲ್ಲಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಅನ್ನ ಪ್ರಸಾದ, ರಾತ್ರಿ 8.30ಕ್ಕೆ ದೇವಸ್ಥಾನದಲ್ಲಿ ಕಾರ್ತಿಕೋತ್ಸವ, ಮಹಾಮಂಗಳಾರತಿ ಜರುಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net