ಕವಿವ ಸಂಘದ ಸಂಸ್ಥಾಪನಾ ದಿನಾಚರಣೆ

Vidyavardhaka sangha
Published on

ಧಾರವಾಡ: ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜು. 21 ರಂದು ಸಂಜೆ 5.30ಕ್ಕೆ ಸಂಘದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ‘ಸಿರಿಗನ್ನಡ ಪುಸ್ತಕ ಮನೆ’ ಉದ್ಘಾಟನೆ, ಧಾರವಾಡ ಹಿರಿಮೆ ಹೆಚ್ಚಿಸಿದ ಚೇತನಗಳ ಸ್ಮರಣೆ ಮತ್ತು ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ.

‘ಸಿರಿಗನ್ನಡ ಪುಸ್ತಕ ಮನೆ’ ಉದ್ಘಾಟನೆಯನ್ನು ಆಕಾಶವಾಣಿ ವಿಶ್ರಾಂತ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ನೆರವೇರಿಸುವರು. ಸಂಘದ ಗೌರವ ಉಪಾಧ್ಯಕ್ಷ ಆನಂದ ಪಾಂಡುರಂಗಿ ಅಧ್ಯಕ್ಷತೆ ವಹಿಸುವರು.

ಸಂಘದ ಹಿರಿಯ ಸದಸ್ಯರಾದ ಡಾ. ಡಿ.ಎಂ. ಹಿರೇಮಠ, ಪ್ರಭಾವತಿ ಗುಂಜೆಟ್ಟಿ, ಶಂಕರ ಕುಂಬಿ, ಪ್ರೊ. ಕೆ.ಎಸ್. ಕೌಜಲಗಿ, ಲಲಿತಾ ಕೆರಿಮನಿ ಹಾಗೂ ಡಿ.ಬಿ. ಢಂಗ ಅವರನ್ನು ಸನ್ಮಾನಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net