ಬಿ.ಇಡಿ ಕಾಲೇಜಿನಲ್ಲಿ ಸಂಸ್ಥಾಪನ ದಿನಾಚರಣೆ

IMG-20241113-WA0013_1.jpg
Published on

ಹುಬ್ಬಳ್ಳಿ; ಇಲ್ಲಿಯ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಕೆಎಲ್ಇ 109ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು. ಸಂಸ್ಥಾಪಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ, ಸಂಸ್ಥೆಯ ಉಗಮ ಹಾಗೂ ಅದಕ್ಕೆ ಕಾರಣೀಭೂತರಾದ ಸಪ್ತರ್ಷಿಗಳು ಹಾಗೂ ದಾನಿಗಳನ್ನು ಸ್ಮರಿಸಿದರು.

ಉಪನ್ಯಾಸಕ ಡಾ. ಅನಿಲ ಗುಮಗೋಳ ಕಾರ್ಯಕ್ರಮ ನಿರೂಪಿಸಿದರು. ಡಾ. ಜಯಶ್ರೀ ಕುಂದಗೋಳಮಠ, ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net