ಮೇ೨೭ ರಂದು ಪ್ರತಿಷ್ಠಾಪನಾ ವಾರ್ಷಿಕೋತ್ಸವ

prathistapana mahothsava
Published on

ಮಡಿಕೇರಿ: ಮಡಿಕೇರಿ ನಗರದ ದೇಚೂರು ಶ್ರೀರಾಮ-ವಿದ್ಯಾ ಗಣಪತಿ ದೇವಸ್ಥಾನದ ೨೮ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮೇ೨೭ ರಂದು ಹೆಚ್.ಆರ್.ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.

ಮಂಗಳವಾರ ಬೆಳಗ್ಗೆಯಿಂದಲೇ ನಿರ್ಮಾಲ್ಯ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಮಹಾಗಣಪತಿ ಮೂರ್ತಿಗೆ ಅಬಿಷೇಕ, ಬಯಲು ಆಂಜನೇಯ ಪೂಜೆ, ಅಷ್ಠದ್ರವ್ಯ ಮಹಾಗಣಪತಿ, ನವಗ್ರಹ ಹೋಮ, ನಾಗಪೂಜೆ, ಮಧ್ಯಾಹ್ನ ಮಹಾಪೂಜೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net