ಯದರೂರಿನ ಚರಂಡಿಯಲ್ಲಿ ಗಬ್ಬುವಾಸನೆ

20, srinivaspur photo -5
Published on

ಶ್ರೀನಿವಾಸಪುರ: ತಾಲೂಕಿನ ಯದರೂರು ಗ್ರಾಮದ ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಬರುತ್ತಿದೆ. ಗ್ರಾಮ ಪಂಚಾಯಿತಿ ಸ್ವಚ್ಛತೆಗೆ ಮುಂದಾದರೂ ಸಹ ಒಂದೆರೆಡು ಕುಟುಂಬಗಳು ಅಡ್ಡಿಪಡಿಸುತ್ತಿರುವುದರಿಂದ ಸ್ವಚ್ಛತೆ ಕಾರ್ಯಗತವಾಗುತ್ತಿಲ್ಲ. ಇದರಿಂದ ಮಕ್ಕಳು ಮತ್ತು ವೃದ್ಧರಿಗೆ ಅನಾರೋಗ್ಯ ಶುರುವಾಗಿದ್ದು, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಅಡ್ಡಿಪಡಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಉಳಿದ ಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಲೂಕಿನ ಲಕ್ಷಿ$್ಮಸಾಗರ ಗ್ರಾಮ ಪಂಚಾಯಿತಿಯ ಯದರೂರು ಗ್ರಾಮದ ಪ್ರಮುಖ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅದರಲ್ಲೂ ಸರ್ಕಾರಿ ಶಾಲೆ ಹಿಂಭಾಗ ಇರುವ ನಿವಾಸಿಗಳ ಪರಿಸ್ಥಿತಿ ಶೋಚನೀಯವಾಗಿದೆ. ತುಂಬಿರುವ ಚರಂಡಿ ನೀರು ಕೆಳ ಭಾಗಕ್ಕೂ, ಮೇಲ್ಬಾಗಕ್ಕೂ ಹೋಗದೆ ಅಲ್ಲಿಯೇ ಶೇಖರಣೆ ಆಗಿ ಸೊಳ್ಳೆಗಳು, ನೊಣಗಳ ಕಾಟ ಹೆಚ್ಚಾಗಿ ದುರ್ವಾಸನೆ ಬರುತ್ತಿದೆ.

ಮಕ್ಕಳು ವಾರಕ್ಕೆ 2&-3 ಸಾರಿ ಆಸ್ಪತ್ರೆಗಳಿಗೆ ಹೋಗಿ ಬರುವುದು ತಪ್ಪಿಲ್ಲ, ಈ ರೊಚ್ಚು ನೀರಿನ ದುರ್ವಾಸನೆ ಪಕ್ಕದ ಶಾಲೆಯ ವಿದ್ಯಾರ್ಥಿಗಳಿಗೂ ಆವರಿಸಿದೆ. ಜತೆಗೆ ಮಳೆ ಬಂದರೆ ಚರಂಡಿ ನೀರು, ಮಳೆ ನೀರು ಮನೆಗಳ ಒಳಗಡೆ ನುಗ್ಗಿ ಪರಿಸ್ಥಿತಿ ಹೈರಾಣವಾಗುತ್ತಿದೆ ಎಂದು ಸ್ಥಳಿಯರು ದೂರಿದ್ದಾರೆ.

ಅದೇ ರಸ್ತೆಯ ಪಕ್ಕದಲ್ಲಿ ಯದರೂರು ನಾಮಲಕ ಅಳವಡಿಸಿದ್ದು, ಪಕ್ಕದಲ್ಲೇ ಅಂಬೇಡ್ಕರ್​ ಅವರ ಭಾವಚಿತ್ರವಿರುವ ಸ್ಥಳದ ಮುಂಭಾಗ ಮುಖ್ಯಚರಂಡಿ ತುಂಬಿ ಹರಿಯುತ್ತಿದೆ. ಚರಂಡಿಗಳು ಮತ್ತು ಡೆನ್​ ಮೇಲ್ಬಾಗದಿಂದ ಕೆಳಭಾಗದವರೆಗೂ ತ್ಯಾಜ್ಯ ತೆಗೆಯಬೇಕು ಎಂದು ಕೆಲವರು ಪ್ರಯತ್ನ ಮಾಡಿದರೆ. ಇದಕ್ಕೆ ಒಂದೆರೆಡು ಕುಟುಂಬಗಳು ಡೆನ್​ ತೆಗೆಯುವುದು ಬೇಡ ನಮಗೆ ಅಡ್ಡಿಯಾಗುತ್ತದೆ ಎಂದು ಪರಸ್ಪರ ಕಲಹಗಳಿಂದ ಈ ಗ್ರಾಮಕ್ಕೆ ಸ್ವಚ್ಛತೆಯ ಭಾಗ್ಯ ದೊರೆಯದೆ ಇರುವುದು ಶೋಚನೀಯವಾಗಿದೆ.

ಗ್ರಾಮದಲ್ಲೆ ಮೂವರು ಗ್ರಾಪಂ ಸದಸ್ಯರು ಇದ್ದರೂ ಸಹ ಈ ಸಮಸ್ಯೆ ಬಗಹರಿಸುವುದರಲ್ಲಿ ವಿಲರಾಗಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ.

ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಗ್ರಾಮಕ್ಕೆ ರಸ್ತೆ, ಚರಂಡಿ, ಡೆನ್​ಗಾಗಿ ಗ್ರಾಮ ಅಭಿವೃದ್ಧಿಗೆ ಸುಮಾರು 35 ಲಕ್ಷ ರೂ. ಬಿಡುಗಡೆ ಟೆಂಡರ್​ ಹಂತದಲ್ಲಿದೆ. ಹಾಗಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಯಾವುದಾದರು ಅನುದಾನ ಬಳಸಿ, ವಾರ್ಡ್​ ಸಭೆ ಕರೆದು ನಿವಾಸಿಗಳಿಗೆ ಜಾಗೃತಿ ಅರಿವು ಮೂಡಿಸಿ ಸ್ವಚ್ಛತೆಗೆ ಆದ್ಯತೆ ನೀಡಿ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವಂತೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳಿಯರಾದ ಯಲ್ಲಮ್ಮ ಸುಶೀಲಮ್ಮ, ಮುನಿಯಮ್ಮ, ವಿಜಯಲಕ್ಷಿ$್ಮ, ಪೂರ್ಣಿಮ, ವಂದನಾ, ಜಯಂತಿ ಬಾಸ್ಕರ್​, ಲಕ್ಷಿ$್ಮನಾರಾಯಣ ಇದ್ದರು.

ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆ ಮಾಡಿಸುವುದು ಚುನಾಯಿತ ಸದಸ್ಯರ ಮತ್ತು ಅಧಿಕಾರಿಗಳಾದ ನಮಗೆ ಜವಾಬ್ದಾರಿ ಇದ್ದು, 2-3 ಬಾರಿ ಚರಂಡಿಗಳ ಸ್ವಚ್ಛತೆಗೆ ಮುಂದಾದಾಗ 2-&3 ಕುಟುಂಬಗಳ ವಾಸಿಗಳು ಇದಕ್ಕೆ ಅಡ್ಡಿ ಪಡಿಸುತ್ತಿರುವುದರಿಂದ ನಾವು ಕೆಲಸ ಮಾಡಲು ಸಹಕಾರ ನೀಡದೆ ಇರುವುದರಿಂದ ವಿಧಿಇಲ್ಲದೆ ಬೇಸರದಿಂದ ಏನು ಮಾಡಲು ಅವಕಾಶ ಇಲ್ಲದೆ ಅಸಹಾಯಕರಾಗಿದ್ದೇವೆ.

- ಗೋವಿಂದಮ್ಮ

ಅಧ್ಯೆ, ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net